ಜಲಂಧರ್: ಪಂಜಾಬ್‍ನ ಜಲಂಧರ್ ಜಿಲ್ಲೆಯಲ್ಲಿ 8ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬನಲ್ಲಿ ಮೂತ್ರ ಸೇವಿಸುವಂತೆ ಸಹಪಾಠಿಗಳು ಒತ್ತಾಯಿಸಿದ್ದು, ನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಹಪಾಠಿಗಳ ವಿರುದ್ಧ ಶಿಕ್ಷಕರಿಗೆ ದೂರು ನೀಡಲು ಹೋದಾಗ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿ, ಪ್ರಿನ್ಸಿಪಾಲ್ ಬಳಿ ಕರೆದೊಯ್ದಿದ್ದಾರೆ.
ಬಾಲಕನನ್ನು ಜಾತಿ ನಿಂದನೆ ಮಾಡಿ ಥಳಿಸಿದ ಶಿಕ್ಷರ ಶಿರಿಕಿ ಶರ್ಮಾ ಅವರ ವಿರುದ್ಧ ಕೇಸು ದಾಖಲಿಸಲಾಗಿದೆಯ.ಐಪಿಸಿ ಸೆಕ್ಷನ್ 323 ಮತ್ತು ಪರಿಶಿಷ್ ಜಾತಿ ಮತ್ತು ಪಂಗಡ (ಜಾತಿ ನಿಂದನೆ) ಕಾಯ್ದೆ ಪ್ರಕಾರ ಶರ್ಮಾ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ಮನೆಯ ಛಾವಣಿಯಿಂದ ಜಿಗಿದ 12ರ ಹರೆಯದ ಬಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈತನ ಸಹಪಾಠಿಗಳು ನೀರಿನ ಬಾಟಲಿಯಲ್ಲಿ ಮೂತ್ರ ಮಾಡಿ ಅದನ್ನು ಕುಡಿಯುವಂತೆ ಒತ್ತಾಯಿಸಿದ್ದರು, ಸೋಮವಾರ ಸಂಜೆ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.