ಕಾನ್ಪುರ/ ಉನ್ನಾವೊ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದಲಿತರು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಉದ್ಯೋಗ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ರಾಮ ರಾಜ್ಯ’ದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಕಾನ್ಪುರದಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ‘ಈ ದೇಶದ ಶೇ 50ರಷ್ಟು ಜನರು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು. ಶೇ 15ರಷ್ಟು ಮಂದಿ ದಲಿತರು, ಶೇ 8ರಷ್ಟು ಜನರು ಆದಿವಾಸಿಗಳು ಮತ್ತು ಶೇ 15ರಷ್ಟು ಜನರು ಅಲ್ಪಸಂಖ್ಯಾತರು. ಆದರೆ ನೀವು ಎಷ್ಟು ಕಿರುಚಾಡಿದರೂ ನಿಮಗೆ ಉದ್ಯೋಗ ಸಿಗುವುದಿಲ್ಲ’ ಎಂದರು.
ಶ್ರೀಕೃಷ್ಣನಂತೆ ಬಿಂಬಿಸಿ ಪೋಸ್ಟರ್
ಕಾನ್ಪುರ: ರಾಹುಲ್ ಗಾಂಧಿ ಅವರನ್ನು ಶ್ರೀ ಕೃಷ್ಣನಂತೆ ಬಿಂಬಿಸುವ ಪೋಸ್ಟರ್‌ಗಳನ್ನು ಉತ್ತರ ಪ್ರದೇಶ ಜಿಲ್ಲೆಯ ವಿವಿಧೆಡೆ ಬುಧವಾರ ಅಂಟಿಸಲಾಗಿತ್ತು.
ಪೋಸ್ಟರ್‌ಗಳಲ್ಲಿ, ರಾಹುಲ್ ಗಾಂಧಿ ಅವರು ಶ್ರೀ ಕೃಷ್ಣನಂತೆ ರಥವನ್ನು ಮುನ್ನಡೆಸುತ್ತಿರುವಂತೆ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಅವರನ್ನು ಅರ್ಜುನನಂತೆ ತೋರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.