ನವದೆಹಲಿ: ಭಾರತದ ಜಾಗತಿಕ ಚಿತ್ರಣಕ್ಕೆ ಉಂಟಾಗಿರುವ ಹಾನಿಯನ್ನು ಕ್ರಿಕೆಟಿಗರ ಟ್ವೀಟ್‌ಗಳಿಂದ ಪರಿಹರಿಸಲಾಗದು ಎಂದು ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಶಶಿ ತರೂರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲ ಸೂಚಿಸಿ ಖ್ಯಾತ ಗಾಯಕಿ ರಿಹಾನ್ನಾ, ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಸೇರಿದಂತೆ ಅನೇಕ ವಿದೇಶಿ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು. ಆದರೆ ವಿದೇಶಿಯರ ಅಪಪ್ರಚಾರದ ವಿರುದ್ಧ ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಯರು ಟ್ವೀಟ್ ಮಾಡಿದ್ದರು. ಇದು ಪರೋಕ್ಷವಾಗಿ ಸರ್ಕಾರಕ್ಕೆ ಬೆಂಬಲ ಸೂಚಿಸುವಂತಾಗಿತ್ತು.
ಭಾರತ ಸರ್ಕಾರವು ವಿದೇಶಿಯರಿಗೆ ದೇಶದ ಸೆಲೆಬ್ರೆಟಿಗಳು ಪ್ರತಿಕ್ರಿಯಿಸುವಂತೆ ಮಾಡುತ್ತಿರುವುದು ನಿಜಕ್ಕೂ ಮುಜುಗರವನ್ನುಂಟು ಮಾಡುತ್ತಿದೆ. ಭಾರತೀಯ ಸರ್ಕಾರದ ಅಪ್ರಬುದ್ಧತೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಂದ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣಕ್ಕೆ ಆಗಿರುವ ಹಾನಿಯನ್ನು ಕ್ರಿಕೆಟಿಗರ ಟ್ವೀಟ್‌ಗಳಿಂದ ಪರಹರಿಸಲಾಗದು ಎಂದು ಶಶಿ ತರೂರ್ ವಾಗ್ದಾಳಿಮಾಡಿದರು.
ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡು ರೈತರೊಂದಿಗೆ ಪರಿಹಾರಗಳನ್ನು ಚರ್ಚಿಸಿ. ಭಾರತವನ್ನು ಮತ್ತೆ ಒಗ್ಗಟ್ಟಾಗಿ ಪಡೆಯಲಿದ್ದೀರಿ ಎಂದು ಶಶಿ ತರೂರ್ಟ್ವೀಟ್ ಮಾಡಿದರು.
ಈ ಮೊದಲುದೇಶದಆಂತರಿಕ ವಿಷಯದಲ್ಲಿ ವಿದೇಶಿಯರು ಪ್ರತಿಕ್ರಿಯಿಸುತ್ತಿರುವುದರ ವಿರುದ್ಧ ಭಾರತದ ವಿದೇಶಾಂಗ ಸಚಿವಾಲಯವು ಪ್ರಕಟಣೆಯನ್ನು ಹೊರಡಿಸಿತ್ತು. ಇದಾದ ಬೆನ್ನಲ್ಲೇ ದೇಶದ ಬಗ್ಗೆಅಪಪ್ರಚಾರದ ವಿರುದ್ಧ ಮಾಜಿ ಹಾಗೂ ಸಮಕಾಲೀನ ಕ್ರಿಕೆಟ್ ತಾರೆಯರು ಟ್ವೀಟ್ ಮಾಡಿದ್ದರು. ಇವರಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಪ್ರಮುಖರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.