ಹರಿಯಾಣ: ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಅವರು ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.
ಮಹಾವೀರ್ ಸಿಂಗ್ ಪೋಗಟ್ ಮೂಲತಹ ಭಿವಾನಿ ಜಿಲ್ಲೆಯವರಾಗಿದ್ದು,2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಕುಸ್ತಿಪಟು ಗೀತಾ ಪೋಗಟ್ ಅವರಿಗೆ ತರಬೇತುದಾರರಾಗಿದ್ದರು (55 ಮಹಿಳೆಯರ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ).
ಅಜಯ್ ಚೌತಾಲಾ ನೇತೃತ್ವದ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ವತಿಯಿಂದ ಮುಂದಿನ ಚುನಾವಣೆಯಲ್ಲಿ ಫೋಗಟ್ ಸ್ಪರ್ಧಿಸಲಿದ್ದಾರೆ. ಸದ್ಯ ಜೆಜೆಪಿ ಪಕ್ಷದ ಕೋರ್ ಕಮಿಟಿಯ ಸದಸ್ಯರಾಗಿದ್ದಾರೆ.
ಪಕ್ಷವನ್ನು ಅಜಯ್ ಚೌತಾಲಾ ಅವರ ಹಿರಿಯ ಮಗ ದುಶ್ಯಂತ್ ಚೌತಾಲಾ ಮುನ್ನಡೆಸಲಿದ್ದು, ಏಪ್ರಿಲ್‌ನಲ್ಲಿ ಸಾರ್ವತ್ರಿಕ ಚುನಾವಣೆ ಹಾಗೂ ಸೆಪ್ಟೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿದ್ದಾರೆ. ಯುವ ಜನತೆಯನ್ನು ಸೆಳೆಯುವ ಉದ್ದೇಶದಿಂದ ಪೋಗಟ್‌ರನ್ನು ಕಣಕ್ಕಿಳಿಸಲು ಪಕ್ಷ ತಿರ್ಮಾನಿಸಿದೆ.
ಕುಸ್ತಿಪಟುಗಳಾದ ಗೀತಾ ಪೋಗಟ್, ಒಲಂಪಿಕ್ಸ್‌ಗೆ ಆರ್ಹತೆ ಪಡೆದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಮತ್ತೊಂದೆಡೆ ಬಬಿತ ಕುಮಾರಿ 2012ರಲ್ಲಿ ನಡೆದ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಹಾಗೂ 2014ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.
ಪೋಗಟ್ ಕುಟುಂಬದ ಮತ್ತೊಂದು ಕುಡಿವಿನೀಶಾ, ಇತ್ತೀಚಿಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ 2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಸದ್ಯ ಚೌತಾಲಾ ವಂಶಸ್ಥರು ಕುಟುಂಬ ರಾಜಕಾರಣ ಎರಡು ಬಣಗಳಾಗಿದೆ, ವಿಧಾನಸಭಾ ವಿರೋಧ ಪಕ್ಷದ ನಾಯಕ ಓಂಪ್ರಕಾಶ್ ಚೌತಾಲಾ ಅವರ ಕಿರಿಯ ಮಗ ಅಭಯ್ ಚೌತಾಲಾ ಒಂದೆಡೆಯಾದರೆ, ಹಿರಿಯ ಮಗ ದುಶ್ಯಂತ್ ಚೌತಾಲಾ ಮತ್ತೊಂದೆಡೆ ಪ್ರಬಲ ಸ್ಪರ್ಧಿಯಾಗಿದ್ದಾರೆ.
‘ದಂಗಲ್’ (ಮಲ್ಲಯುದ್ದ, ಕುಸ್ತಿ) ಚಿತ್ರ ಕುಸ್ತಿಪಟು ಮಹಾವೀರ್ ಸಿಂಗ್ ಹಾಗೂ ಅವರ ಪುತ್ರಿಯರಾದ ಗೀತಾ ಮತ್ತು ಬಬಿತಾ ಪೋಗಟ್ ನಡುವಣ ಕಥಾನಕವನ್ನು ಹೊಂದಿದೆ. ಈ ಚಿತ್ರದಲ್ಲಿ ತಂದೆಯ ಪಾತ್ರದಲ್ಲಿ ನಟ ಅಮೀರ್ ಖಾನ್ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.