‘ತಾನಾಜಿ: ದಿ ಅನ್‌ಸಂಗ್ ವಾರಿಯರ್ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಿ ತೋರಿಸಿದ್ದರಬಗ್ಗೆ ನನಗೆ ಅರಿವಿತ್ತು. ಸಿನಿಮಾದಲ್ಲಿನ ರಾಜಕೀಯದ ಬಗ್ಗೆ ಒಬ್ಬ ಭಾರತೀಯನಾಗಿಸಮಸ್ಯೆ ಇದೆಯೇ ಹೊರತು ಕಲಾವಿದನಾಗಿಇಲ್ಲ’ ಎಂದು ನಟ ಸೈಫ್ ಅಲಿ ಖಾನ್ ಹೇಳಿದರು.
‘ಉದಯ್ ಭಾನು ಸಿಂಗ್ ಪಾತ್ರ ತುಂಬ ಅದ್ಭುತವಾಗಿದೆ. ಆ ಪಾತ್ರವನ್ನು ನಿರ್ವಹಿಸಲು ನಾನು ಉತ್ಸುಕನಾಗಿದ್ದೆ. ಆದರೆ, ಈ ಸಿನಿಮಾದಲ್ಲಿ ತೋರಿಸಿರುವುದನ್ನೇಜನ ಇತಿಹಾಸ ಎನ್ನುವುದಾದರೆ, ಅದನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ನನಗೆ ಇತಿಹಾಸ ಬಗ್ಗೆ ಸಾಕಷ್ಟು ಅರಿವಿದೆ’ ಎಂದುಫಿಲ್ಮ್ ಕಂಪ್ಯಾನಿಯನ್ ವೆಬ್‌ಸೈಟ್‌ನೊಂದಿಗೆ ನಡೆಸಿದ ಸಂದರ್ಶನದಲ್ಲಿ ವಿವರಿಸಿದರು.
‘ವಿಪರ್ಯಾಸವೆಂದರೆ, ಜನಪ್ರಿಯ ಹಾಗೂ ತಪ್ಪು ಇತಿಹಾಸ ನಿರೂಪಣೆಯೇ ಸಿನಿಮಾದ ಗಳಿಕೆ ಮತ್ತು ಯಶಸ್ಸು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜನ ಇಷ್ಟ ಪಡುತ್ತಾರೆ ಎಂದು ಇನ್ನೂ ಉತ್ಪ್ರೇಕ್ಷೆ ಮಾಡಿತೋರಿಸುವುದು ಸರಿಯಾದ ಆಲೋಚನೆಯಲ್ಲ ಮತ್ತು ಅದು ಅಪಾಯಕಾರಿಯೂ ಹೌದು. ಸತ್ಯ ಹೇಳುವ ಬದಲಿಗೆ ಜನಪ್ರಿಯತೆಗೆ ಹೆಚ್ಚು ಒತ್ತುಕೊಡಲಾಗುತ್ತಿದೆ’ ಎಂದು ಹೇಳಿದರು.
‘ಇತಿಹಾಸ ಎನ್ನುವುದು ಬುದ್ಧಿವಂತರ ಕ್ಷೇತ್ರವಾಗಿದೆ. ಈಗ ಶಾಲೆಗಳಲ್ಲಿ ಯಾರೋ ಕಲಿಸುವ ಇತಿಹಾಸವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉಲ್ಲೇಖಿಸುವುದಕ್ಕೆ ಹೋಗಬಾರದು. ಏಕೆಂದರೆ, ತಪ್ಪನ್ನು ಸುಲಭವಾಗಿ ಗುರುತಿಸುತ್ತಾರೆ ಮತ್ತು ಅದನ್ನು ಸರಿಪಡಿಸುತ್ತಾರೆ’ ಎಂದು ಇತಿಹಾಸ ಆಸಕ್ತರಾದ ಸೈಫ್ ವಿಶ್ಲೇಷಿಸಿದರು.
‘1947ರಲ್ಲಿ ನಡೆದ ದೇಶ ವಿಭಜನೆಯ ಸಮಯದಲ್ಲಿ ನನ್ನ ಪೂರ್ವಜರು ಭಾರತ ಜಾತ್ಯಾತೀತ ದೇಶ ಎಂದು ನಂಬಿ ಇಲ್ಲಿಯೇ ಉಳಿದರು. ಜಾತ್ಯಾತೀತಆಲೋಚನೆ ವಾಸ್ತವಿಕ ಕಲ್ಪನೆಯಾಗಿತ್ತೆ ಎಂದು ಕೇಳಿದರೆ, ಅದುನನಗೆ ಗೊತ್ತಿಲ್ಲ’ ಎಂದು ಇತಿಹಾಸದ ನಿರೂಪಣೆಗಳ ದೃವೀಕರಣದ ಕುರಿತುಮಾತನಾಡಿದರು.
‘ತಾನಾಜಿಯಲ್ಲಿನ ರಾಜಕೀಯವು, ಸಮಸ್ಯಾತ್ಮಕದ ಜೊತೆಗೆ ಅಪಾಯಕಾರಿಯೂ ಹೌದು. ಆದರೆ, ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಒಬ್ಬ ನಟನಾಗಿ ವ್ಯಕ್ತಪಡಿಸುವ ಅಭಿಪ್ರಾಯ ಸಾಕಷ್ಟು ರೂಪಗಳನ್ನು ಪಡೆಯುತ್ತದೆ. ನನ್ನ ಪ್ರಕಾರ, ಕಲಾವಿದರು ರಾಜಕೀಯದಲ್ಲಿ ಪಾಲ್ಗೊಳ್ಳುವುದು ಉತ್ತಮ ಆಲೋಚನೆಯಲ್ಲ. ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳ ಬಗ್ಗೆ ಸೆಲೆಬ್ರೆಟಿಗಳ ಅಭಿಪ್ರಾಯಗಳುಅವರಿಗೆ ತಿರುಗುಬಾಣವಾಗಬಹುದು.ಸಿನಿಮಾ ಬಿಡುಗಡೆ ಮೇಲೂ ಅದು ಪರಿಣಾಮ ಬೀರಬಹುದುಅಥವಾ ಗಳಿಕೆಗೆ ಪೆಟ್ಟು ನೀಡಬಹುದು’ ಎಂದುಚಿತ್ರರಂಗದಬಹುತೇಕರುಈ ವಿಷಯದ ಬಗ್ಗೆ ಮೌನ ವಹಿಸಿರುವುದಕ್ಕೆಸೈಫ್ ಕಾರಣ ನೀಡಿದರು.
ಭಾರತದ ಪರಿಕಲ್ಪನೆ ಹುಟ್ಟಿದ್ದುಬ್ರಿಟಿಷರಿಂದ
‘ಬ್ರಿಟಿಷರು ನೀಡುವವರೆಗೆ ಭಾರತ ಎನ್ನುವ ಪರಿಕಲ್ಪನೆ ಇರಲಿಲ್ಲ. ಹೀಗೆ ಸಾಕಷ್ಟು ವಿಷಯಗಳಿವೆ. ಧ್ವನಿ ಎತ್ತುವುದಕ್ಕೆ ನಿಜವಾಗಿಯೂ ಯಾವುದೇ ರಚನಾತ್ಮಕ ಅಂಶವಿದೆ ಎಂದು ನನಗೆ ಅನ್ನಿಸುವುದಿಲ್ಲ. ನೀವು ಏಕೆ ಇದನ್ನು ಮಾಡುತ್ತಿದ್ದೀರಿ ಎನ್ನುವುದು ನಿಮಗೆ ಗೊತ್ತಿದ್ದರೆ ಸಾಕು’ ಎಂದು ಹೇಳಿದರು.
ಓಂ ರಾವೋತ್ ನಿರ್ದೇಶದನತನ್ಹಾಜಿ ಸಿನಿಮಾದಲ್ಲಿಅಜಯ್ ದೇವಗನ್, ಸೈಫ್ ಅಲಿ ಖಾನ್, ಕಾಜೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.