ನವದೆಹಲಿ: ‘ತಾಲಿಬಾನ್ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾದ ಮುಂಬೈನ ಪತ್ರಿಕಾ ಛಾಯಾಗ್ರಾಹಕ ಡ್ಯಾನಿಷ್ ಸಿದ್ಧಿಕಿ ಅವರ ಸಮಾಧಿಯನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಸ್ಮಶಾನದಲ್ಲಿ ಮಾಡಲಾಗುವುದು’ ಎಂದು ಭಾನುವಾರ ಪ್ರಕಟಣೆಯೊಂದು ತಿಳಿಸಿದೆ.
‘ಜಾಮಿಯಾ ಮಿಲಿಯಾ ಇಸ್ಲಾಮಿಯಾದ (ಜೆಎಂಐ) ಸ್ಮಶಾನದಲ್ಲಿ ಸಮಾಧಿ ಮಾಡಬೇಕೆಂದು ಡ್ಯಾನಿಷ್ ಸಿದ್ಧಿಕಿ ಅವರ ಕುಟುಂಬ ಮಾಡಿರುವ ಮನವಿಯನ್ನು ಜೆಎಂಐನ ಕುಲಪತಿ ಸ್ವೀಕರಿಸಿದ್ದಾರೆ. ಈ ಸ್ಮಶಾನದಲ್ಲಿ ವಿಶ್ವವಿದ್ಯಾಲಯದ ನೌಕರರು, ಅವರ ಸಂಗಾತಿ ಮತ್ತು ಅಪ್ರಾಪ್ತ ಮಗುವಿನ ಸಮಾಧಿಗೆ ಮಾತ್ರ ಸ್ಥಳ ಮೀಸಲಾಗಿದೆ’ ಎಂದು ವಿಶ್ವವಿದ್ಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಸಿದ್ಧಿಕಿ ಅವರು ಇದೇ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರ ತಂದೆ ಅಖ್ತರ್ ಸಿದ್ಧಿಕಿ ಅವರು ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಡೀನ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.