ಮುಂಬೈ (ಪಿಟಿಐ): ‘ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಮೂಲದ ಎರಡನೇ ಪತ್ನಿ ಇದ್ದಾರೆ. ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ’ ಎಂದು ದಾವೂದ್‌ನ ಸೋದರಳಿಯ ಅಲೀಶಾಹ್ ಪಾರ್ಕರ್, ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ತಿಳಿಸಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಅಪರಾಧ ಸಿಂಡಿಕೇಟ್ ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದನಾ ಜಾಲದ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ. ಈ ಸಂಬಂಧ ‘ಡಿ– ಕಂಪನಿ’ ಎನ್ನುವ ಅಂತರರಾಷ್ಟ್ರೀಯ ಅಪರಾಧ ಸಿಂಡಿಕೇಟ್ ಕುರಿತ ತನಿಖೆ ವೇಳೆ ಎನ್‌ಐಎಗೆ ಅಲೀಶಾಹ್ ಈ ಮಾಹಿತಿ ನೀಡಿದ್ದಾರೆ.
‘ದಾವೂದ್‌ನ ಮೊದಲ ಪತ್ನಿ ಹೆಸರು ಮೆಹಜಬೀನ್. ದಾವೂದ್‌ಗೆ ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ’ ಎಂದರು. ದಾವೂದ್‌ನ ಎರಡನೇ ಹೆಂಡತಿ ಪಾಕಿಸ್ತಾನದ ಪಠಾಣ್ ಸಮುದಾಯಕ್ಕೆ ಸೇರಿದವರು.
ಡಿ–ಕಂಪನಿ ಕಾರ್ಯಚಟುವಟಿಕೆಗಳಿಗೆ ಹವಾಲಾ ಮೂಲಕ ದೊಡ್ಡ ಮಟ್ಟದ ಹಣವನ್ನು ಕಳುಹಿಸುತ್ತಾರೆ. ಮುಂಬೈ ಮತ್ತು ಇತರ ಭಾಗಗಳಲ್ಲಿ ಭಯೋತ್ಪಾದನಾ ದಾಳಿ ನಡೆಸಿ, ಜನರಲ್ಲಿ ಭಯ ಹುಟ್ಟಿಸುವುದು ಡಿ–ಕಂಪನಿಯ ಕಾರ್ಯಚಟುವಟಿಕೆಯಾಗಿದೆ’ ಎಂದೂ ಅವರು ಆರೋಪಿಸಿದ್ದಾರೆ.
ಅಲೀಶಾಹ್, ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್ ಅವರ ಮಗ. ಕಳೆದ ನವೆಂಬರ್‌ನಲ್ಲಿ ಈ ಪ್ರಕರಣ ಸಂಬಂಧ ಎನ್‌ಐಎ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಅಲೀಶಾಹ್ ಅವರ ಹೆಸರೂ ಇತ್ತು.
ದಾವೂದ್ ತನ್ನ ಕುಟುಂಬದವರೊಂದಿಗೆ ಕರಾಚಿಯಲ್ಲಿರುವ ಅಬ್ದುಲ್ಲಾ ಗಾಜಿ ಬಾಬಾ ದರ್ಗಾದ ಹಿಂಭಾಗ ಇರುವ ದಂಡು ಪ್ರದೇಶದಲ್ಲಿ ವಾಸವಿದ್ದಾರೆ
ಅಲೀಶಾಹ್ ಪಾರ್ಕರ್, ದಾವೂದ್ ಸೋದರಳಿಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.