ADVERTISEMENT

ಡ್ರಗ್ಸ್‌ ಪ್ರಕರಣ: ದಾವೂದ್‌ ಇಬ್ರಾಹಿಂ ಸಹೋದರ ಕಸ್ಕರ್‌ ಎನ್‌ಸಿಬಿ ಕಸ್ಟಡಿಗೆ

ಪಿಟಿಐ
Published 26 ಜೂನ್ 2021, 7:02 IST
Last Updated 26 ಜೂನ್ 2021, 7:02 IST
ದಾವೂದ್‌ ಇಬ್ರಾಹಿಂ ಸಹೋದರ ಕಸ್ಕರ್‌ನನ್ನು ಕಸ್ಟಡಿಗೆ ಪಡೆದ ಎನ್‌ಸಿಬಿ ಅಧಿಕಾರಿಗಳು                                                               –ಪಿಟಿಐ ಚಿತ್ರ
ದಾವೂದ್‌ ಇಬ್ರಾಹಿಂ ಸಹೋದರ ಕಸ್ಕರ್‌ನನ್ನು ಕಸ್ಟಡಿಗೆ ಪಡೆದ ಎನ್‌ಸಿಬಿ ಅಧಿಕಾರಿಗಳು                                                               –ಪಿಟಿಐ ಚಿತ್ರ   

ಠಾಣೆ/ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ನನ್ನುಡ್ರಗ್ಸ್‌ ಪ್ರಕರಣದ ವಿಚಾರಣೆಗಾಗಿ ಒಂದು ದಿನದ ಮಟ್ಟಿಗೆ ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ವಶಕ್ಕೆ ನೀಡಲು ಬಿವಾಂಡಿ ನ್ಯಾಯಾಲಯ ಆದೇಶಿಸಿದೆ.

ಇತ್ತೀಚೆಗೆ ವಶಪಡಿಸಿಕೊಂಡ 27 ಕೆ.ಜಿ ಹಶೀಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟರ್‌ನನ್ನು ವಿಚಾರಣೆಗೆ ಒಳಪಡಿಸಲು ವಶಕ್ಕೆ ನೀಡುವಂತೆ ಎನ್‌ಸಿಬಿ ಅರ್ಜಿ ಸಲ್ಲಿಸಿತ್ತು. ಈ ಕುರಿತು ಮ್ಯಾಜಿಸ್ಟ್ರೇಟ್‌ ಎಂ.ಎಂ ಮಾಲಿ ಅವರು ವಿಚಾರಣೆ ನಡೆಸಿದರು.

‘ಈಚೆಗೆ ಎನ್‌ಸಿಬಿ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿತ್ತು. ಈ ವೇಳೆ 27 ಕೆ.ಜಿ ಹಶೀಶ್‌ ಸಿಕ್ಕಿತ್ತು. ಠಾಣೆ ಜೈಲಿನಲ್ಲಿರುವ ಕಸ್ಕರ್‌ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಹಾಗೂ ಈ ಡ್ರಗ್ಸ್‌ನ ಮೂಲ ಜಮ್ಮು–ಕಾಶ್ಮೀರ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ’ ಎಂದು ಅಧಿಕಾರಿಗಳು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.