ಮುಂಬೈ: ಬಾಂದ್ರಾ ಟರ್ಮಿನಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ನೂಕುನುಗ್ಗಲು ಪರಿಣಾಮಕಾರಿಯಾಗಿ ನಿರ್ವಹಿಸಲು, 500ರಿಂದ 600ರಷ್ಟು ಪ್ರಯಾಣಿಕರಿಗೆ ಆಗುವಷ್ಟು ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕಾಲ್ತುಳಿತದಿಂದ 10 ಮಂದಿ ಗಾಯಗೊಂಡ ಘಟನೆ ನಡೆದ ಮರು ದಿನವೇ, ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿನೀತ್ ಅಭಿಷೇಕ್ ಈ ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ 2.45ರ ಸುಮಾರಿಗೆ ಬಾಂದ್ರಾ– ಗೋರಖ್‌ಪುರ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲು ಪ್ಲಾಟ್‌ಫಾರ್ಮ್ ಪ್ರವೇಶಿಸುತ್ತಿದ್ದಂತೆ, ಪ್ರಯಾಣಿಕರು ಹತ್ತಲು ನೂಕುನುಗ್ಗಲು ಆಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಈ ರೈಲು ಬೆಳಿಗ್ಗೆ 5.10ಕ್ಕೆ ಹೊರಡಲಿತ್ತು. ಉತ್ತರಪರದೇಶ ಮತ್ತು ಬಿಹಾರದಲ್ಲಿ ದೀಪಾವಳಿ ಹಾಗೂ ಛಠ್ ಹಬ್ಬಕ್ಕೆ ಹೋಗಲು ಪ್ರಯಾಣಿಕರು ಸಾವಿರಾರು ಸಂಖ್ಯೆಯಲ್ಲಿ ಹೊರಟಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.