ದಾಹೋದ್ (ಗುಜರಾತ್): ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜೈಲು ಅಧಿಕಾರಿಗಳ ಮುಂದೆ ಶರಣಾದ ಕೆಲವೇ ದಿನಗಳಲ್ಲಿ, ಅವರಲ್ಲಿ ಒಬ್ಬನಿಗೆ ತನ್ನ ಮಾವನ ಸಾವಿನ ಕಾರಣ ಗುಜರಾತ್ ಹೈಕೋರ್ಟ್ ಐದು ದಿನಗಳ ಪೆರೋಲ್ ನೀಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ದಾಹೋದ್ ಜಿಲ್ಲೆಯ ನಿವಾಸಿಯಾದ ಅಪರಾಧಿ ಪ್ರದೀಪ್ ಮೋದಿಯಾ ಗೋಧ್ರಾ ಜಿಲ್ಲಾ ಕಾರಾಗೃಹದಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾನೆ ಎಂದು ದಾಹೋದ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಶಾಖ ಜೈನ್ ತಿಳಿಸಿದರು.
ತನ್ನ ಮಾವ ಮೃತಪಟ್ಟಿರುವುದರಿಂದ ಒಂದು ತಿಂಗಳು ಪೆರೋಲ್ ನೀಡಬೇಕೆಂದು ಮೋದಿಯಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಒಂದು ತಿಂಗಳ ಬದಲಿಗೆ ಐದು ದಿನಗಳ ಪೆರೋಲ್‌ಗೆ ನ್ಯಾಯಮೂರ್ತಿ ಎಂ.ಆರ್. ಮೆಂಗ್ಡೆ ಅನುಮತಿ ನೀಡಿದ್ದಾರೆ.
2002ರ ಗೋಧ್ರಾ ಘಟನೆಯ ನಂತರದ ಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಏಳು ಸಂಬಂಧಿಕರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎಲ್ಲಾ 11 ಅಪರಾಧಿಗಳನ್ನು ಶಿಕ್ಷೆ ಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ರದ್ದುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.