ADVERTISEMENT

5-12 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್, ಕೋವ್ಯಾಕ್ಸಿನ್ ಲಸಿಕೆಗಳಿಗೆ ಅಸ್ತು

ಪಿಟಿಐ
Published 26 ಏಪ್ರಿಲ್ 2022, 10:43 IST
Last Updated 26 ಏಪ್ರಿಲ್ 2022, 10:43 IST
ಕೋವ್ಯಾಕಸ್ಇನ್: ಪಿಟಿಐ ಚಿತ್ರ
ಕೋವ್ಯಾಕಸ್ಇನ್: ಪಿಟಿಐ ಚಿತ್ರ   

ನವದೆಹಲಿ: ಕೋವಿಡ್ ನಾಲ್ಕನೇ ಅಲೆಯ ಆತಂಕದ ನಡುವೆ ಮಕ್ಕಳಿಗೆ ತುರ್ತು ಬಳಕೆಗಾಗಿ 3 ಲಸಿಕೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಭಾರತೀಯ ಔಷಧ ಮಹಾನಿಯಂತ್ರಕರ ಕಚೇರಿ (ಡಿಸಿಜಿಐ) ಮಂಗಳವಾರ 6-12 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಯ ಅನುಮತಿಯನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝೈಡಸ್ ಕ್ಯಾಡಿಲಾದ ಝೈಕೋವ್‌ಡಿ ಲಸಿಕೆಯ ಎರಡು ಡೋಸ್ ತುರ್ತು ಬಳಕೆಯ ಅನುಮತಿ ಮತ್ತು 5-12 ವಯಸ್ಸಿನ ಮಕ್ಕಳಿಗೆ ಕೋರ್ಬೆವ್ಯಾಕ್ಸ್ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ.

ವಿಷಯ ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಡಿಸಿಜಿಐ ಈ ಅನುಮತಿಗಳನ್ನು ನೀಡಿದೆ.

ADVERTISEMENT

5 ರಿಂದ 12 ವರ್ಷದ ಮಕ್ಕಳು ಮತ್ತು 6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಕ್ರಮವಾಗಿ ಕೋರ್ಬೆವ್ಯಾಕ್ಸ್ ಮತ್ತು ಕೋವಾಕ್ಸಿನ್‌ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಕಳೆದ ವಾರ ಬಯಾಲಾಜಿಕಲ್–ಇ ಮತ್ತು ಭಾರತ್ ಬಯೋಟೆಕ್‌ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸಮಿತಿ ಪರಿಶೀಲನೆ ಮಾಡಿತ್ತು. ಅದೇವೇಳೆ, ಕ್ಯಾಡಿಲಾ ಕಂಪನಿಯ ಅರ್ಜಿಯನ್ನೂ ಸಹ ಪರಿಶೀಲಿಸಲಾಗಿತ್ತು.

ಬಯಾಲಾಜಿಕಲ್ ಇ ಕಂಪನಿಯ ಕೋರ್ಬೆವ್ಯಾಕ್ಸ್ ಲಸಿಕೆಯನ್ನು 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಈಗಾಗಲೇ ನೀಡಲಾಗುತ್ತಿದೆ. ಡಿಸೆಂಬರ್ 24, 2021ರಂದು 12 ರಿಂದ 18 ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು.

ಭಾರತವು ಮಾರ್ಚ್ 16 ರಿಂದ 12-14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.