ADVERTISEMENT

ಉನ್ನಾವೊ: ಮೃತ ಹುಡುಗಿಯರ ಅಂತ್ಯಕ್ರಿಯೆಗೆ ಬಿಗಿಭದ್ರತೆ

ಪಿಟಿಐ
Published 19 ಫೆಬ್ರುವರಿ 2021, 9:16 IST
Last Updated 19 ಫೆಬ್ರುವರಿ 2021, 9:16 IST
ಉನ್ನಾವೊ ಜಿಲ್ಲೆಯ ಬಾಬುರಾಹ ಗ್ರಾಮದಲ್ಲಿ ಮೇವು ತರಲು ಹೋದ ಇಬ್ಬರು ಹದಿ ಹರೆಯದ ಹುಡುಗಿಯರು ಶವವಾಗಿ ಪತ್ತೆಯಾದ ಸ್ಥಳವನ್ನು ಪರಿಶೀಲಿಸುತ್ತಿರುವ ಪೊಲೀಸರು.
ಉನ್ನಾವೊ ಜಿಲ್ಲೆಯ ಬಾಬುರಾಹ ಗ್ರಾಮದಲ್ಲಿ ಮೇವು ತರಲು ಹೋದ ಇಬ್ಬರು ಹದಿ ಹರೆಯದ ಹುಡುಗಿಯರು ಶವವಾಗಿ ಪತ್ತೆಯಾದ ಸ್ಥಳವನ್ನು ಪರಿಶೀಲಿಸುತ್ತಿರುವ ಪೊಲೀಸರು.   

ಉನ್ನಾವೊ (ಉತ್ತರ ಪ್ರದೇಶ) : ದನಗಳಿಗೆ ಮೇವು ತರಲು ಅರಣ್ಯಕ್ಕೆ ಹೋಗಿದ್ದ ಮೂವರು ಹದಿಹರೆಯದ ಹುಡುಗಿಯರಲ್ಲಿ ಇಬ್ಬರು ಅಶೋಹಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುರಾಹ ಗ್ರಾಮದ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಬೆಳಿಗ್ಗೆ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು.

ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಕುಟುಂಬದವರಿಗೆ ಸೇರಿದ ಜಮೀನಿನಲ್ಲಿ ಮೃತ ಕೋಮಲ್ (15) ಮತ್ತು ಕಾಜಲ್ (14) ಅವರ ಶವಗಳನ್ನು ಸಮಾಧಿ ಮಾಡಲಾಯಿತು. ಅಸ್ವಸ್ಥಳಾಗಿದ್ದ 16 ವರ್ಷದ ಹುಡುಗಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇವು ತರುವುದಕ್ಕಾಗಿ ಅರಣ್ಯಕ್ಕೆ ತೆರಳಿದ್ದ ಮೂವರು ಹುಡುಗಿಯರು ಮನೆಗೆ ಹಿಂದಿರುಗದ ಕಾರಣ, ಸ್ಥಳೀಯ ಗ್ರಾಮಸ್ಥರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು. ಬುಧವಾರ ರಾತ್ರಿ ಗ್ರಾಮದ ಸಮೀಪದ ಜಮೀನಿನಲ್ಲಿ ಇಬ್ಬರು ಹುಡುಗಿಯರು ಶವವಾಗಿ ಪತ್ತೆಯಾದರೆ, ಒಬ್ಬ ಹುಡುಗಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದರು. ಈ ಮೂವರು ಹುಡುಗಿಯರು ಪರಸ್ಪರ ಸಂಬಂಧಿಕರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.