ADVERTISEMENT

ಮುಂಬೈ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಏಜೆನ್ಸೀಸ್
Published 18 ಡಿಸೆಂಬರ್ 2018, 2:42 IST
Last Updated 18 ಡಿಸೆಂಬರ್ 2018, 2:42 IST
   

ಮುಂಬೈ:ಅಂಧೇರಿ ಹೊರವಲಯದ ಮರೋಲ್‌ನಲ್ಲಿನ ಸರ್ಕಾರಿ ಆಸ್ಪತ್ರೆ(ಇಎಸ್‌ಐಸಿ)ಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿದೆ.

ಗಾಯಗೊಂಡಿರುವ ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಸೇರಿ 147 ಜನರನ್ನು ರಕ್ಷಿಸಲಾಗಿದೆ. ಮೃತಪಟ್ಟ 8 ಜನರಲ್ಲಿ ಎರಡು ತಿಂಗಳ ಹಸುಳೆಯೂ ಸೇರಿದೆ.

ಐದು ಅಂತಸ್ತಿನ ಇಎಸ್‌ಐಸಿ ಆಸ್ಪತ್ರೆಯ ಕಟ್ಟಡದ 4ನೇ ಅಂತಸ್ತಿನಲ್ಲಿ ಸಂಜೆ 4:20ಕ್ಕೆ ಬೆಂಕಿ ಕಾಣಿಸಿಕೊಂಡಿತು. ಇದರ ವ್ಯಾಪ್ತಿ 4:54ರ ಸುಮಾರಿಗೆ ಇಡೀ ಅಂತಸ್ತನ್ನು ಆವರಿಸಿಕೊಂಡಿತು ಎಂದು ಅಗ್ನಿ ಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ ರೋಗಿಗಳು ಸೇರಿದಂತೆ ನೂರಾರು ಮಂದಿ ಸಿಲುಕಿಕೊಂಡಿದ್ದರು. ಬಳಿಕ ಅವರನ್ನು ಅ‌ಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ADVERTISEMENT

10 ಅಗ್ನಿ ಶಾಮಕ ವಾಹನಗಳು, 6 ನೀರಿನ ಟ್ಯಾಂಕ್‌ಗಳು, ಏಣಿಗಳನ್ನು ಒಳಗೊಂಡ 3ವಾಹನಗಳು ಹಾಗೂ 16 ಆಂಬ್ಯುಲೆನ್ಸ್‌ಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು ಎಂದು ಕಾರ್ಯಾಚರಣೆಯಲ್ಲಿ ನಿರ್ವಹಣೆಯಲ್ಲಿದ್ದ ಹಿರಿಯ ಅಧಿಕಾರಿಗಳು ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್ ವರದಿ ಮಾಡಿದೆ. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.