ADVERTISEMENT

ಭಾರತದ ಜೊತೆ ಬಾಂಧವ್ಯಕ್ಕೆ ಒತ್ತು: ಅಮೆರಿಕ

ಪಿಟಿಐ
Published 2 ಜುಲೈ 2024, 16:44 IST
Last Updated 2 ಜುಲೈ 2024, 16:44 IST
   

ವಾಷಿಂಗ್ಟನ್‌: ಭಾರತದ ಜೊತೆಗೆ ಅಮೆರಿಕವು ಆರ್ಥಿಕತೆ, ರಕ್ಷಣಾ ಸಹಕಾರ ಸೇರಿ ಹಲವು ಪ್ರಮುಖ ಕ್ಷೇತ್ರಗಳಲ್ಲಿ ತನ್ನ ಸಹಭಾಗಿತ್ವವನ್ನು ಗಟ್ಟಿಗೊಳಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದರು.

ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ವೇದಾಂತ್‌ ಪಟೇಲ್‌ ಅವರು ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭಾರತದ ಜೊತೆಗಿನ ತನ್ನ ಬಾಂಧವ್ಯವನ್ನು ಅಮೆರಿಕ ಪೋಷಿಸಲಿದೆ. ಮತ್ತಷ್ಟು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ನಾವು ಬಲಪಡಿಸಬೇಕಿದೆ ಎಂದರು. 

ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ, ‘ಯಾವುದೇ ರಾಷ್ಟ್ರವು ಭಯೋತ್ಪಾದನೆಗೆ ಉತ್ತೇಜನ ನೀಡುವುದನ್ನು ಖಂಡಿಸುತ್ತದೆ. ಅಂತಿಮವಾಗಿ ಇದು ಭಾರತ ಮತ್ತು ಪಾಕಿಸ್ತಾನಕ್ಕೆ ಬಿಟ್ಟ ವಿಚಾರ. ನೆರೆ ರಾಷ್ಟ್ರದೊಂದಿಗೆ ಯಾವುದೇ ದೇಶವು ಉತ್ತಮ ಬಾಂಧವ್ಯವನ್ನು ಹೊಂದುವುದನ್ನು ನಾವು ಸ್ವಾಗತಿಸುತ್ತೇವೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.