ನವದೆಹಲಿ: ಇಡೀ ದೇಶದಾದ್ಯಂತ ಆಕ್ರೋಶದ ಕಿಡಿಯನ್ನು ಹಚ್ಚಿರುವ ಹೈದರಾಬಾದ್‌ನ 26 ವರ್ಷದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಮತ್ತು ಸಂಬಾಲ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರದ ಪ್ರಕರಣಗಳಿಂದಾಗಿ ತೀವ್ರ ಆಘಾತವಾಗಿದೆ. ಈ ಕುರಿತು ನನ್ನ ಆಕ್ರೋಶವನ್ನು ವ್ಯಕ್ತಪಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಇಂತಹ ಭಯಾನಕ ಘಟನೆಗಳು ನಡೆದಾಗ ಒಂದು ಸಮಾಜವಾಗಿ ನಾವು ಮಾತನಾಡುವುದಕ್ಕಿಂತ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಹಿಂಸೆಯನ್ನು ತಿರಸ್ಕರಿಸುವ, ಮಹಿಳೆಯರನ್ನು ಪ್ರತಿದಿನವೂ ಕ್ರೂರವಾಗಿ ಕಾಡುತ್ತಿರುವ ಅಸಹ್ಯಕರ ದೌರ್ಜನ್ಯ ಒಪ್ಪಿಕೊಳ್ಳುವುದನ್ನುನಿರಾಕರಿಸುವತ್ತ,ನಮ್ಮ ಮನಸ್ಥಿತಿಗಳನ್ನು ಬದಲಿಸುವತ್ತಸಾಗಬೇಕಿದೆ ಎಂದಿದ್ದಾರೆ.
ನವೆಂಬರ್ 27ರ ರಾತ್ರಿ ಹೈದರಾಬಾದ್‌ನಲ್ಲಿ ವೈದ್ಯೆ ಕೆಲಸಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ನಾಲ್ವರು ಲಾರಿಚಾಲಕರು ಹಾಗೂ ಕ್ಲೀನರ್‌ಗಳು ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಕೊಲೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಕಳೆದ ವಾರ ಉತ್ತರ ಪ್ರದೇಶದ ಸಾಂಬಾದಲ್ಲಿ 16 ವರ್ಷದ ಬಾಲಕಿಯನ್ನು ನೆರೆಮನೆಯವನೇ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ್ದ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಬಾಲಕಿ ಶನಿವಾರ ದೆಹಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.