ನವದೆಹಲಿ:ರಫೇಲ್ ಯುದ್ಧವಿಮಾನ ಪೂರೈಕೆ ಒಪ್ಪಂದದ ಅಡಿ,ಯುರೋಪಿನ ಕ್ಷಿಪಣಿ ಅಭಿವೃದ್ಧಿ ಸಂಸ್ಥೆ ಎಂಬಿಡಿಎಗೆ ರಕ್ಷಣಾ ಸಚಿವಾಲಯವು ₹8.54 ಕೋಟಿ (10 ಲಕ್ಷ ಯೂರೊ) ದಂಡ ವಿಧಿಸಿದೆ.
ಖರೀದಿ ಮಾಡುವ ದೇಶದಲ್ಲಿ ಹೂಡಿಕೆ ಮಾಡಬೇಕು ಎಂಬ ನಿಯಮ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸಿದ್ದಕ್ಕೆ ಸಂಸ್ಥೆ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ರಫೇಲ್ ಯುದ್ಧ ವಿಮಾನ ತಯಾರಿಸುವ ಫ್ರಾನ್ಸ್‌ನ ಡಾಸೊ ಏವಿಯೇಷನ್ ಸಂಸ್ಥೆಗೆ ಎಂಬಿಡಿಎ ಸಂಸ್ಥೆಯುಕ್ಷಿಪಣಿಗಳನ್ನು ಪೂರೈಕೆ ಮಾಡುತ್ತದೆ. 2016ರಲ್ಲಿ, ಭಾರತ–ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಏರ್ಪಟ್ಟಿತ್ತು.
ಖರೀದಿ ಮಾಡುವ ದೇಶದಲ್ಲಿ ಹೂಡಿಕೆ ಮಾಡುವ ನಿಯಮವೂ ಇದರ ಭಾಗವಾಗಿತ್ತು. 2019ರ ಸೆಪ್ಟೆಂಬರ್ ಹಾಗೂ 2022ರ ಸೆಪ್ಟೆಂಬರ್ ನಡುವೆ ಒಪ್ಪಂದ ಮೌಲ್ಯದ ಶೇ 50ರಷ್ಟನ್ನು ಭಾರತದಲ್ಲಿ ಹೂಡಿಕೆ ಮಾಡಬೇಕಿತ್ತು. ಈ ಬಗ್ಗೆ ಕಳೆದ ಸೆಪ್ಟೆಂಬರ್‌ನಲ್ಲಿ ಸಿಎಜಿ ಗಮನ ಸೆಳೆದಿತ್ತು.
ನಿಯಮಾವಳಿಯಂತೆ ಎಂಬಿಡಿಎ ಸಂಸ್ಥೆಯು ಈಗಾಗಲೆ ದಂಡ ಪಾವತಿಸಿದೆ. ಜೊತೆಗೆ, ರಕ್ಷಣಾ ಸಚಿವಾಯದ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿರುವುದಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.