ನವದೆಹಲಿ: ಮಿಗ್–29 ಯುದ್ಧವಿಮಾನ ಸೇರಿದಂತೆ ₹39,125 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ಸಂಬಂಧಿಸಿದ ಒಪ್ಪಂದಗಳಿಗೆ ರಕ್ಷಣಾ ಸಚಿವಾಲಯ ಶುಕ್ರವಾರ ಸಹಿ ಹಾಕಿದೆ.
ಮಿಗ್–29 ಯುದ್ಧ ವಿಮಾನ ಪೂರೈಕೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜೊತೆಗಿನ ಒಡಂಬಡಿಕೆ ಸೇರಿದಂತೆ ಒಟ್ಟು ಐದು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಡ್ರೋನ್ ಹಾಗೂ ಇತರ ವೈಮಾನಿಕ ಸಾಧನಗಳ ಮೂಲಕ ನಡೆಸುವ ದಾಳಿಗೆ ಪ್ರತಿರೋಧ ಒಡ್ಡಬಲ್ಲ ವ್ಯವಸ್ಥೆ (ಸಿಐಡಬ್ಲ್ಯುಎಸ್) ಹಾಗೂ ರಾಡಾರ್ ಪೂರೈಕೆಗಾಗಿ ಎಲ್ ಅಂಡ್ ಟಿ ಜೊತೆ ಎರಡು ಒಪ್ಪಂದ ಮಾಡಿಕೊಳ್ಳಲಾಗಿದೆ. ಬ್ರಹ್ಮೋಸ್ ಕ್ಷಿಪಣಿಗಳ ಪೂರೈಕೆಗಾಗಿ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಎರಡು ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಿದೆ.
ಈ ಒಪ್ಪಂದಗಳು ಸೇನೆಯ ಸಾಮರ್ಥ್ಯಗಳಿಗೆ ಮತ್ತಷ್ಟು ಬಲ ತುಂಬಲಿವೆ. ಶಸ್ತ್ರಾಸ್ತ್ರಗಳಿಗಾಗಿ ವಿದೇಶಿ ಮೂಲದ ತಯಾರಕರ ಮೇಲಿನ ಅವಲಂಬನೆ ತಗ್ಗಿಸಲಿವೆ ಎಂದು ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.