ADVERTISEMENT

ಡೆಹ್ರಾಡೂನ್: ಪ್ರಧಾನಿಯ 'ಮನ್ ಕೀ ಬಾತ್' ಆಲಿಸದ ಮಕ್ಕಳಿಗೆ ತಲಾ ₹100 ದಂಡ

ಐಎಎನ್ಎಸ್
Published 5 ಮೇ 2023, 11:28 IST
Last Updated 5 ಮೇ 2023, 11:28 IST
ಮನ್ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ
ಮನ್ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ    (ಸಂಗ್ರಹ ಚಿತ್ರ)

ಡೆಹ್ರಾಡೂನ್: ಇತ್ತೀಚೆಗಷ್ಟೇ (ಏ. 30) ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತು ಆದ 'ಮನ್ ಕೀ ಬಾತ್' ಕಾರ್ಯಕ್ರಮದ 100ನೇ ಸಂಚಿಕೆ ರೇಡಿಯೊದಲ್ಲಿ ಪ್ರಸಾರಗೊಂಡಿತು.

ಆದರೆ ಡೆಹ್ರಾಡೂನ್‌ನ ಶಾಲೆಯೊಂದರಲ್ಲಿ ಪ್ರಧಾನಿ ಅವರ ಮನ್ ಕೀ ಬಾತ್ ಆಲಿಸದ ಮಕ್ಕಳ ಮೇಲೆ ತಲಾ ₹100 ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಮನ್ ಕೀ ಬಾತ್ ಆಲಿಸಲು ಶಾಲೆಗೆ ಬಾರದ ವಿದ್ಯಾರ್ಥಿಗಳಿಂದ ದಂಡ ವಸೂಲಿ ಮಾಡಲಾಗಿದೆ ಎಂಬ ಬಗ್ಗೆ ದೂರು ಕೇಳಿ ಬಂದಿದೆ.

ADVERTISEMENT

ಈ ಸಂಬಂಧ ಪೋಷಕರು ಹಾಗೂ ವಿದ್ಯಾರ್ಥಿಗಳ ಹಕ್ಕುಗಳ ರಾಷ್ಟ್ರೀಯ ಸಂಘದ ಅಧ್ಯಕ್ಷ ಆರೀಫ್ ಖಾನ್ ಅವರು ಡೆಹ್ರಾಡೂನ್‌ ಮುಖ್ಯ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದರಂತೆ ಶಾಲೆಗೆ ನೋಟಿಸ್ ಜಾರಿ ಮಾಡಿರುವ ಶಿಕ್ಷಣ ಇಲಾಖೆಯು, ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.

ಆರೀಫ್ ಪ್ರಕಾರ, ಡೆಹ್ರಾಡೂನ್‌ನ ಜಿಆರ್‌ಡಿ ನಿರಂಜನಪುರ ಅಕಾಡೆಮಿಯಲ್ಲಿ ಈ ಘಟನೆ ನಡೆದಿದೆ. ಮಕ್ಕಳಿಗೆ ₹100 ರೂಪಾಯಿ ದಂಡ ಅಥವಾ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವಂತೆ ಶಾಲೆ ಆದೇಶ ಹೊರಡಿಸಿದೆ. ಇದರ ಸ್ಕ್ರೀನ್‌ಶಾಟ್ ಸಹ ಪೋಷಕರು ಹಂಚಿದ್ದಾರೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.