ADVERTISEMENT

ದೆಹಲಿ: ವಾಯು ಗುಣಮಟ್ಟ ‘ಅತಿ ಕಳಪೆ’

ಪಿಟಿಐ
Published 31 ಅಕ್ಟೋಬರ್ 2024, 14:13 IST
Last Updated 31 ಅಕ್ಟೋಬರ್ 2024, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಗುರುವಾರವೂ ‘ಅತಿ ಕಳಪೆ’ ಮಟ್ಟದಲ್ಲಿದೆ. 

ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 330 ಇತ್ತು. ದೀಪಾವಳಿ ಹಬ್ಬದ ಕಾರಣ ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಗುರುವಾರ ಮುಂಜಾನೆಯೇ ವಾತಾವರಣದಲ್ಲಿ ದಟ್ಟ ಮಂಜು ಆವರಿಸಿತ್ತು. ಆನಂದ್‌ ವಿಹಾರ್‌ನಲ್ಲಿ ವಾಯು ಗುಣಮಟ್ಟವು ‘ತೀರಾ ಕಳಪೆ’ ಮಟ್ಟದಲ್ಲಿತ್ತು. ನಗರದ ಇತರ 38 ನಿಗಾ ಕೇಂದ್ರಗಳಲ್ಲಿಯೂ ಗಾಳಿಯ ಗುಣಮಟ್ಟ ‘ಅತಿ ಕಳಪೆ’ ಇರುವುದಾಗಿ ವರದಿಯಾಗಿದೆ.

ADVERTISEMENT

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಸಂಬಂಧ ಎಲ್ಲ ವಿಧದ ಪಟಾಕಿಗಳ ಉತ್ಪಾದನೆ, ಸಂಗ್ರಹ, ಮಾರಾಟ ಹಾಗೂ ಬಳಕೆಯನ್ನು 2025ರ ಜನವರಿ 1ರವರೆಗೆ ನಿಷೇಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.