ADVERTISEMENT

ಸಿಖ್ಖರ ವಿರುದ್ಧ ಹೇಳಿಕೆ: ನಟಿ ಕಂಗನಾಗೆ ಸಮನ್ಸ್ ಜಾರಿ ಮಾಡಿದ ದೆಹಲಿ ವಿಧಾನಸಭೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2021, 8:42 IST
Last Updated 25 ನವೆಂಬರ್ 2021, 8:42 IST
ನಟಿ ಕಂಗನಾ ರನೌತ್, ಚಿತ್ರ ಕೃಪೆ–ಇನ್‌ಸ್ಟಾಗ್ರಾಂ
ನಟಿ ಕಂಗನಾ ರನೌತ್, ಚಿತ್ರ ಕೃಪೆ–ಇನ್‌ಸ್ಟಾಗ್ರಾಂ   

ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ಸಿಖ್‌ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ಧತೆಯ ಮೇಲಿನ ಸಮಿತಿ ನಟಿ ಕಂಗನಾ ರನೌತ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.

ಎಎಪಿ ಶಾಸಕ ರಾಘವ್ ಚಡ್ಡಾ ಅವರ ನೇತೃತ್ವದಶಾಂತಿ ಮತ್ತು ಸೌಹಾರ್ಧತೆಯ ಮೇಲಿನ ಸಮಿತಿ ಈ ಸಮನ್ಸ್ ಜಾರಿಗೊಳಿಸಿದೆ. ಡಿಸೆಂಬರ್ 6ರೊಳಗೆ ಉತ್ತರಿಸುವಂತೆ ಕಂಗನಾಗೆ ತಾಕೀತು ಮಾಡಿದೆ.

ಸಿಖ್ ಸಾಮೂಹಿಕ ಹತ್ಯೆ ಮತ್ತು ನರಮೇಧವನ್ನು ನೆನಪಿಸಿಕೊಂಡಿದ್ದ ಕಂಗನಾ, ಇವು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ವ್ಯಾವಹಾರಿಕ ಮತ್ತು ಯೋಜಿತ ನಡೆ. ಸಿಖ್‌ ಸಮುದಾಯದವರು ಇಂದಿರಾ ಗಾಂಧಿ ಶೂ ಕೆಳಗೆ ನಲುಗಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು.

ADVERTISEMENT

ಕಂಗನಾ ರನೌತ್‌ ವಿರುದ್ಧ ದೆಹಲಿ 'ಸಿಖ್‌ ಗುರುದ್ವಾರ ಮ್ಯಾನೇಜ್‌ಮೆಂಟ್‌ ಕಮಿಟಿ'ಯು(ಡಿಎಸ್‌ಜಿಎಂಸಿ) ಕೂಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಎಫ್‌ಐಆರ್‌ ದಾಖಲಿಸುವಂತೆ ಕಳೆದ ವಾರ ಮನವಿ ಮಾಡಿತ್ತು

ಶಿರೋಮಣಿ ಅಕಾಲಿದಳದ ನಾಯಕ ಮತ್ತು ಡಿಎಸ್‌ಜಿಎಂಸಿ ಅಧ್ಯಕ್ಷ ಮನ್‌ಜಿಂದರ್‌ ಸಿಂಗ್‌ ಸಿರ್ಸಾ ನೇತೃತ್ವದ ನಿಯೋಗವೂ ಕಂಗನಾ ವಿರುದ್ಧ ದೂರು ಸಲ್ಲಿಸಿತ್ತು. ಕಂಗನಾ ಅವರು ರೈತರ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಲಿಸ್ತಾನಿ ಆಂದೋಲನಕ್ಕೆ ಹೋಲಿಸಿದ್ದಾರೆ ಹಾಗೂ ಸಿಖ್‌ ಸಮುದಾಯವನ್ನು ಖಲಿಸ್ತಾನಿ ಉಗ್ರರು ಎಂದು ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಖಾರ್‌ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.