ADVERTISEMENT

ಕೇಜ್ರಿವಾಲ್ ಬಂಧನದಿಂದ ಸಾಂವಿಧಾನಿಕ ಬಿಕ್ಕಟ್ಟು: BJP ಶಾಸಕರಿಂದ ರಾಷ್ಟ್ರಪತಿ ಭೇಟಿ

ಪಿಟಿಐ
Published 29 ಆಗಸ್ಟ್ 2024, 15:47 IST
Last Updated 29 ಆಗಸ್ಟ್ 2024, 15:47 IST
<div class="paragraphs"><p>ರಾಷ್ಟ್ರಪತಿ ದ್ರೌಪದಿ ಮುರ್ಮು</p></div>

ರಾಷ್ಟ್ರಪತಿ ದ್ರೌಪದಿ ಮುರ್ಮು

   

 ಪಿಟಿಐ ಚಿತ್ರ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಲ್ಲಿರುವುದರಿಂದ ಉದ್ಭವಿಸಿರುವ ‘ಸಂವಿಧಾನ ಬಿಕ್ಕಟ್ಟಿನ’ ಬಗ್ಗೆ ಪ್ರಸ್ತಾಪಿಸಲು ದೆಹಲಿಯ ಬಿಜೆಪಿ ಶಾಸಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ ಎಂದು ವಿರೋಧ ‍‍ಪಕ್ಷದ ನಾಯಕ ವಿಜೇಂದರ್ ಗುಪ್ತಾ ಹೇಳಿದ್ದಾರೆ.

ADVERTISEMENT

ಶುಕ್ರವಾರ ಸಂಜೆ ದೆಹಲಿ ಶಾಸಕರ ನಿಯೋಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಜ್ಞಾಪಕ ಪತ್ರ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಆರನೇ ದೆಹಲಿ ಹಣಕಾಸು ಆಯೋಗ ರಚಿಸದೇ ಇರುವ ಹಾಗೂ ವಿಧಾನಸಭೆಯಲ್ಲಿ ಸಿ.ಎ.ಜಿ ವರದಿ ಮಂಡಿಸದೇ ಇರುವುದನ್ನೂ ಇದೇ ವೇಳೆ ಪ್ರಸ್ತಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ದೆಹಲಿಯ ಕೇಜ್ರಿವಾಲ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಡಳಿತ ವ್ಯವಸ್ಥೆ ಪತನಗೊಂಡಿದೆ ಎಂದು ಗುಪ್ತಾ ಇದೇ ವೇಳೆ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.