ADVERTISEMENT

₹50 ನೀಡಿದರೆ ಮನೆ ಬಾಗಿಲಿಗೆ ಸರ್ಕಾರಿ ಸೇವೆ

ಪಿಟಿಐ
Published 15 ಜುಲೈ 2018, 16:51 IST
Last Updated 15 ಜುಲೈ 2018, 16:51 IST

ನವದೆಹಲಿ : ಹೆಚ್ಚುವರಿಯಾಗಿ ₹50 ಪಾವತಿಸಿದರೆ, ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಜನನ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್ ಸೇರಿದಂತೆ 100ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಮಧ್ಯವರ್ತಿ ಸಂಸ್ಥೆ ಮೂಲಕ ಜನರ ಮನೆಬಾಗಿಲಿಗೆ ತಲುಪಿಸುವಂತೆ ಆಡಳಿತಾತ್ಮಕ ಸುಧಾರಣಾ ಇಲಾಖೆ ಮಾಡಿದ್ದ ಶಿಫಾರಸಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಆಗಸ್ಟ್ ತಿಂಗಳಿನಿಂದ ಯೋಜನೆ ಜಾರಿಗೆ ಬರಲಿದೆ. ಪಟ್ಟಿಯಲ್ಲಿರುವ ಸೇವೆಗಳಿಗಾಗಿ ಯಾರೊಬ್ಬರೂ ಸರತಿಯಲ್ಲಿ ನಿಲ್ಲಬೇಕಾಗಿಲ್ಲ ಎಂದು ದೆಹಲಿ ಸರ್ಕಾರ ಹೇಳಿದೆ. ಮಧ್ಯವರ್ತಿ ಏಜೆನ್ಸಿಯು ಈ ಸಂಬಂಧ ಕಾಲ್‌ಸೆಂಟರ್‌ ತರೆಯಲಿದ್ದು, ಸಂಚಾರಿ ಸಹಾಯಕರು ಸೇವೆಗಳನ್ನು ಜನರಿಗೆ ಪೂರೈಸಲಿದ್ದಾರೆ.

ADVERTISEMENT

ಕೆಲಸ ಹೇಗೆ?: ವಾಹನ ಚಾಲನಾ ಪರವಾನಗಿ ಪಡೆಯಬೇಕಾದರೆ, ಕಾಲ್‌ಸೆಂಟರ್‌ಗೆ ಕರೆ ಮಾಡಿ ವಿವರಗಳನ್ನು ನೀಡಬೇಕು. ಸಂಚಾರಿ ಸಹಾಯಕರು ಮನೆಗೆ ಬಂದು ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಅರ್ಜಿದಾರರು ಚಾಲನಾ ಪರೀಕ್ಷೆಗಾಗಿ ಒಮ್ಮೆ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಬಳಿಕ ಪ್ರಮಾಣಪತ್ರವನ್ನು ಅವರೇ ಮನೆಗೆ ತಲುಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.