ನವದೆಹಲಿ: ಮ್ಯಾಗಜೈನ್‌ರಹಿತ ಪಿಸ್ತೂಲ್ ಒಂದನ್ನು ದೆಹಲಿಯ ನಜಾಫ್‌ಗಢದಲ್ಲಿ, 10 ವರ್ಷದ ಶಾಲಾ ಬಾಲಕನ ಬ್ಯಾಗ್‌ನಿಂದ ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದರು.
ಬಾಲಕನು ಅದನ್ನು ಆಟಿಕೆ ಎಂದು ಭಾವಿಸಿ ಶಾಲೆಗೆ ತಂದಿದ್ದ ಎಂದು ಪೊಲೀಸರು ಹೇಳಿದರು.
ದೀಪಕ್ ವಿಹಾರ ಪ್ರದೇಶದ ಶಾಲೆಯಲ್ಲಿ ಬಾಲಕನು 6ನೇ ತರಗತಿಯಲ್ಲಿ ಓದುತ್ತಿದ್ದ. ನಜಾಫ್‌ಗಢ ಠಾಣೆಗೆ ಶನಿವಾರ ಕರೆ ಬಂದಾಗ, ಪೊಲೀಸರು ಹೋಗಿ ಪರಿಶೀಲಿಸಿದರು.
ಪೊಲೀಸರು ಬರುವ ಹೊತ್ತಿಗೆ ಶಾಲಾ ವ್ಯವಸ್ಥಾಪಕ ಮಂಡಳಿಯವರು ಬಾಲಕನ ತಾಯಿಯನ್ನು ಕೂಡ ವಿಚಾರಣೆಗೆ ಕರೆಸಿದ್ದರು.
‘ಬಾಲಕನ ತಂದೆಯ ಬಳಿ ಪರವಾನಗಿ ಇದ್ದ ಪಿಸ್ತೂಲ್ ಇತ್ತು. ಕೆಲವು ತಿಂಗಳ ಹಿಂದೆ ತಂದೆಯು ತೀರಿಹೋದರು. ಪೊಲೀಸ್ ಠಾಣೆಗೆ ಪಿಸ್ತೂಲ್ ಅನ್ನು ನೀಡಲೆಂದು ತಾಯಿ ಹೊರಗೆ ಎತ್ತಿಟ್ಟಿದ್ದಾಗ, ಮಗನು ಅದನ್ನು ಆಟಿಕೆ ಎಂದು ಭಾವಿಸಿ ಬ್ಯಾಗಿನೊಳಗೆ ಇಟ್ಟುಕೊಂಡಿದ್ದ. ಬಾಲಕನೇ ಈ ವಿಷಯ ಸ್ಪಷ್ಟಪಡಿಸಿದ. ಪರವಾನಗಿಯು ಅಧಿಕೃತವಾಗಿತ್ತೆ ಎಂದು ಪರಿಶೀಲಿಸಿದೆವು. ಪಿಸ್ತೂಲ್ ಅನ್ನು ಪೊಲೀಸರ ವಶಕ್ಕೆ ಅದೇ ದಿನ ಬಾಲಕನ ತಾಯಿ ನೀಡಿದರು’ ಎಂದು ಪೊಲೀಸರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.