ನವದೆಹಲಿ: ದೆಹಲಿಯ ಹಳೆ ರಾಜಿಂದರ್ ನಗರ ಪ್ರದೇಶದ ಕೋಚಿಂಗ್ ಕೇಂದ್ರದ ತಳಮಹಡಿಯ ನಾಲ್ವರು ಮಾಲೀಕರು ಹಾಗೂ ಎಸ್‌ಯುವಿ ವಾಹನದ ಚಾಲಕ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಇಲ್ಲಿನ ನ್ಯಾಯಾಲಯವೊಂದು ಬುಧವಾರ ತಿರಸ್ಕರಿಸಿದೆ.
ಈ ಕೋಚಿಂಗ್ ಕೇಂದ್ರದ ತಳಮಹಡಿಗೆ ನೀರು ನುಗ್ಗಿದ ಪರಿಣಾಮವಾಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಚಾಲಕ ಮನುಜ್ ಕಥೂರಿಯಾ, ತಳಮಹಡಿಯ ಮಾಲೀಕರಾದ ತೇಜಿಂದರ್ ಸಿಂಗ್, ಪರ್ವಿಂದರ್ ಸಿಂಗ್, ಹರ್ವಿಂದರ್ ಸಿಂಗ್ ಮತ್ತು ಸರಬ್ಜೀತ್ ಸಿಂಗ್ ಅವರ ಜಾಮೀನು ಅರ್ಜಿಗಳನ್ನು ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್ ಅವರು ವಜಾಗೊಳಿಸಿದರು.
ನೀರು ಹರಿಯುತ್ತಿದ್ದ ರಸ್ತೆಯಲ್ಲಿ ಕಥೂರಿಯಾ ಅವರು ಎಸ್‌ಯುವಿ ಚಾಲನೆ ಮಾಡಿ, ನೀರಿನ ಮಟ್ಟ ಹೆಚ್ಚಾಗುವಂತೆ ಮಾಡಿ, ತಳಮಹಡಿಗೆ ನೀರು ನುಗ್ಗಲು ಕಾರಣರಾಗಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಅಪರಾಧಕ್ಕೆ ಪ್ರಚೋದನೆ ನೀಡಿದ ಆರೋಪವನ್ನು ತಳಮಹಡಿಯ ಮಾಲೀಕರ ವಿರುದ್ಧ ಹೊರಿಸಲಾಗಿದೆ. ಐದೂ ಮಂದಿಯನ್ನು ಸೋಮವಾರ ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.