ADVERTISEMENT

ದೆಹಲಿ | ಅಕ್ರಮವಾಗಿ ಸಾಗಿಸುತ್ತಿದ್ದ ₹2 ಸಾವಿರ ಕೋಟಿ ಮೌಲ್ಯದ ಕೊಕೇನ್‌ ವಶ

ಪಿಟಿಐ
Published 10 ಅಕ್ಟೋಬರ್ 2024, 22:30 IST
Last Updated 10 ಅಕ್ಟೋಬರ್ 2024, 22:30 IST
<div class="paragraphs"><p>ಕೊಕೇನ್‌ (ಪ್ರಾತಿನಿಧಿಕ ಚಿತ್ರ)</p></div>

ಕೊಕೇನ್‌ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಪಶ್ಚಿಮ ದೆಹಲಿಯಲ್ಲಿ ₹2,000 ಕೋಟಿ ಮೌಲ್ಯದ 200 ಕಿಲೋಗ್ರಾಂಗಳಷ್ಟು ಕೊಕೇನ್ ಅನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ವಾರದಲ್ಲಿ ಪತ್ತೆಯಾದ ಡ್ರಗ್ಸ್‌ ಕಳ್ಳ ಸಾಗಣೆಯ ಎರಡನೇ ದೊಡ್ಡ ಪ್ರಕರಣವಿದು. ನೈರುತ್ಯ ದೆಹಲಿಯ ಮಹಿಪಾಲ್‌ಪುರದಿಂದ ₹ 5,000 ಕೋಟಿಗೂ ಹೆಚ್ಚು ಮೌಲ್ಯದ 562 ಕಿಲೋಗ್ರಾಂಗಳಷ್ಟು ಡ್ರಗ್ಸ್‌ ವಶಪಡಿಸಿಕೊಂಡ ಪ್ರಕರಣಕ್ಕೂ ಇದರ ನಂಟು ಇರುವ ಶಂಕೆ ಇದೆ. 

ADVERTISEMENT


ಪಶ್ಚಿಮ ದೆಹಲಿಯ ರಮೇಶ್ ನಗರ ಪ್ರದೇಶದಲ್ಲಿ ಇನ್ನೂ ದಾಳಿ ನಡೆಯುತ್ತಿದೆ ಎಂದು ಅಧಿಕಾರಿಯೊ
ಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.