ADVERTISEMENT

ರಶೀದ್‌ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಸಾಧ್ಯತೆ

ಪಿಟಿಐ
Published 28 ಅಕ್ಟೋಬರ್ 2024, 15:17 IST
Last Updated 28 ಅಕ್ಟೋಬರ್ 2024, 15:17 IST
ರಶೀದ್‌
ರಶೀದ್‌   

ನವದೆಹಲಿ: ಜೈಲಿನಲ್ಲಿರುವ ಸಂಸದ ಎಂಜಿನಿಯರ್ ರಶೀದ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿರುವ ದೆಹಲಿ ಹೈಕೋರ್ಟ್, ರಶೀದ್‌ ಸಂಸದರಾಗಿರುವ ಕಾರಣ ಈ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬೇಕಾಗಬಹುದು’ ಎಂದು ಹೇಳಿದೆ.

‘ರಶೀದ್‌ ಪ್ರಸ್ತುತ ಸಂಸದರಾಗಿರುವುದರಿಂದ ಅವರ ವಿರುದ್ಧದ ಪ್ರಕರಣವು ಇದೇ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಬೇಕಾ ಅಥವಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಬೇಕಾ ಎಂಬುವುದನ್ನು ಮೊದಲು ನಿರ್ಧರಿಸಬೇಕು’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಧೀಶ ಛಂದರ್ ಜೀತ್‌ ಸಿಂಗ್‌ ಅವರು ಹೇಳಿದ್ದಾರೆ.

‘ನ್ಯಾಯಾಲಯದ ವ್ಯಾಪ್ತಿಯ ಬಗ್ಗೆ ನಿರ್ಧಾರವಾಗುವವರೆಗೆ ಜಾಮೀನು ಅರ್ಜಿ ತೀರ್ಪನ್ನು ಕಾಯ್ದಿರಿಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ರಶೀದ್‌ ಪ್ರಕರಣಯಾವ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ನವೆಂಬರ್‌ 13ರಂದು ವಿಚಾರಣೆ ನಡೆಯಲಿದ್ದು, ನವೆಂಬರ್‌ 19ರಂದು ಜಾಮೀನು ಅರ್ಜಿಯ ತೀರ್ಪು ಪ್ರಕಟವಾಗುತ್ತದೆ

ಮಧ್ಯಂತರ ಜಾಮೀನು ಅವಧಿ ಪೂರ್ಣಗೊಂಡ ಕಾರಣ, ಬಾರಾಮುಲ್ಲಾ ಸಂಸದ ಅಬ್ದುಲ್‌ ರಶೀದ್‌ ಅವರು ಸೋಮವಾರ ತಿಹಾರ್‌ ಜೈಲಿನ ಅಧಿಕಾರಿಗಳ ಮುಂದೆ ಹಾಜರಾಗಿದ್ದರು.

ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿದ ಆರೋಪದಡಿ ರಶೀದ್‌ 2019ರಿಂದ ತಿಹಾರ್‌ ಜೈಲಿನಲ್ಲಿದ್ದಾರೆ.

ಸೆ.10ರಂದು ರಶೀದ್‌ಗೆ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿ, ಜಮ್ಮು–ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಲು ಅವಕಾಸ ಕಲ್ಪಿಸಿತ್ತು. ಬಳಿಕ ಅವರ ತಂದೆಯ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಕಾರಣ ಮಧ್ಯಂತರ ಜಾಮೀನು ಅವಧಿಯನ್ನು ಅ.28ರವರೆಗೆ ವಿಸ್ತರಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.