ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ನವೀನ್ ಜಿಂದಾಲ್ ಹಾಗೂ ಇತರೆ 14 ಮಂದಿಗೆ ದೆಹಲಿ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
₹1 ಲಕ್ಷ ವೈಯಕ್ತಿಕ ಕರಾರು ಪತ್ರ ಹಾಗೂ ಅಷ್ಟೇ ಮೌಲ್ಯದ ಶೂರಿಟಿ ನೀಡುವಂತೆ ಸಿಬಿಐ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಸೂಚಿಸಿದರು.
ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ನ ಸಲಹೆಗಾರ ಆನಂದ್ ಗೋಯಲ್, ಮುಂಬೈನ ಎಸ್ಸಾರ್ ಪವರ್ ಲಿಮಿಟೆಡ್‌ನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುಶೀಲ್ ಕುಮಾರ್ ಮರೂ, ನಿಹಾರ್ ಸ್ಟಾಕ್ಸ್ ಲಿಮಿಟೆಡ್‌ನ ನಿರ್ದೇಶಕ ಬಿ.ಎಸ್.ಎನ್ ಸೂರ್ಯನಾರಾಯಣನ್, ಮುಂಬೈ ಮೂಲದ ಕೆಇ ಅಂತರರಾಷ್ಟ್ರೀಯ ಮುಖ್ಯ ಆರ್ಥಿಕ ಅಧಿಕಾರಿ ರಾಜೀವ್ ಅಗರ್‌ವಾಲ್ ಮತ್ತು ಗ್ರೀನ್ ಇನ್ಫ್ರಾದ ಉಪಾಧ್ಯಕ್ಷ ಸಿದ್ಧಾರ್ಥ ಮದ್ರಾ ಅವರಿಗೆ ಜಾಮೀನು ನೀಡಲಾಗಿದೆ.
ಏನಿದು ಪ್ರಕರಣ?
ಜಾರ್ಖಂಡ್‌ನ ಅಮರಕೊಂಡ ಮುರ್ಗದಂಗಲ್ ಕಲ್ಲಿದ್ದಲು ನಿಕ್ಷೇಪವನ್ನು 2008 ರಲ್ಲಿ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (ಜೆಎಸ್‌ಪಿಎಲ್) ಮತ್ತು ಗಗನ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್‌ಗೆ (ಜಿಎಸ್‌ಐಪಿಎಲ್) ಹಂಚಿಕೆ ಮಾಡುವ ವೇಳೆ ಅವ್ಯವಹಾರ ಎಸಗಿದ ಆರೋಪ ಇವರ ಮೇಲಿದೆ. ಈ ಪ್ರಕರಣದಲ್ಲಿ ಸಿಬಿಐ ಎಲ್ಲ 15 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.
ಇದನ್ನೂ ಓದಿ..
ಕಲ್ಲಿದ್ದಲು: ಜಿಂದಾಲ್ ವಿರುದ್ಧ ದೋಷಾರೋಪಕ್ಕೆ ಆದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.