ನವದೆಹಲಿ: ತಮ್ಮ ಬ್ಯಾಂಕ್ ಲಾಕರ್ ಅನ್ನು ಪರಿಶೀಲಿಸಲು ಸಿಬಿಐ ಅಧಿಕಾರಿಗಳು ಮಂಗಳವಾರ ಬರಲಿದ್ದಾರೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಎಂದು ಹೇಳಿದ್ದಾರೆ.
ಸಿಬಿಐ ಅಧಿಕಾರಿಗಳಿಗೆ ಈ ಲಾಕರ್‌ಗಳಲ್ಲಿ ಏನೂ ಸಿಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.
‘ನಾಳೆ(ಮಂಗಳವಾರ) ನಮ್ಮ ಬ್ಯಾಂಕ್ ಲಾಕರ್ ಪರಿಶೀಲಿಸಲು ಸಿಬಿಐ ಬರಲಿದೆ. ಆಗಸ್ಟ್ 19 ರಂದು ನನ್ನ ನಿವಾಸದಲ್ಲಿ 14 ಗಂಟೆಗಳ ಕಾಲ ನಡೆದ ಶೋಧದಲ್ಲಿ ಅವರಿಗೆ ಏನೂ ಸಿಗಲಿಲ್ಲ. ಲಾಕರ್‌ನಲ್ಲಿಯೂ ಏನೂ ಸಿಗುವುದಿಲ್ಲ. ನಾನು ಸಿಬಿಐ ಅಧಿಕಾರಿಗಳನ್ನುಸ್ವಾಗತಿಸುತ್ತೇನೆ. ನನ್ನ ಕುಟುಂಬ ಹಾಗೂ ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಅಬಕಾರಿ ನೀತಿ ಅಕ್ರಮದ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಅವರ ನಿವಾಸ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಕಳೆದ ವಾರ ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.