ನವದೆಹಲಿ:ತಮ್ಮನ್ನು ಭಯೋತ್ಪಾದಕ ಎಂದು ಹೇಳಿದ ಪಶ್ಚಿಮ ದೆಹಲಿಯಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿದದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,ನಾನು ಯಾರು ಎಂಬುದನ್ನುದೆಹಲಿಯ ಜನರು ನಿರ್ಧರಿಸಲಿ ಎಂದಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಕೇಜ್ರಿವಾಲ್, ಕಳೆದ ಐದು ವರ್ಷಗಳಿಂದ ನಾನು ದೆಹಲಿಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಇವತ್ತು ಬಿಜೆಪಿ ನನ್ನನ್ನು ಭಯೋತ್ಪಾದಕ ಎನ್ನುತ್ತಿದೆ. ಇದು ಖೇದಕರ.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ ಭಾವುಕರಾದ ಅವರು,ನನಗೆ ಸಕ್ಕರೆ ಕಾಯಿಲೆ ಇದೆ. ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ. ಸಕ್ಕರೆ ಕಾಯಿಲೆಯಿರುವ ವ್ಯಕ್ತಿ ಮೂರು ನಾಲ್ಕು ಗಂಟೆಗಳಿಗೊಮ್ಮೆ ಆಹಾರ ಸೇವಿಸದಿದ್ದರೆ ಆತ ಸಾಯಬಹುದು. ಅಂಥಾ ಪರಿಸ್ಥಿತಿಯಲ್ಲಿ ನಾನು ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದೆ. ಒಮ್ಮೆ 15 ದಿನ ಮತ್ತೊಮ್ಮೆ 10 ದಿನ ಉಪವಾಸ ಕುಳಿತಿದ್ದೆ.
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಆರೋಗ್ಯ ವಲಯ ಸುಧಾರಿಸಲು ಮತ್ತು ಹಿರಿಯ ನಾಗರಿಕರು ಉಚಿತವಾಗಿ ತೀರ್ಥಯಾತ್ರೆ ಕೈಗೊಳ್ಳುವುದಕ್ಕಾಗಿ ನಾನು ಕೆಲಸ ಮಾಡಿದ್ದೇನೆ. ಭಯೋತ್ಪಾದಕನೊಬ್ಬ ಈ ರೀತಿ ಮಾಡುತ್ತಾನಾ? ಕಳೆದ ಐದು ವರ್ಷಗಳಲ್ಲಿ ಈ ಜನರು ನನ್ನ ವಿರುದ್ಧ ಎಲ್ಲ ರೀತಿಯ ಅಧಿಕಾರಗಳನ್ನು ಬಳಸಿದರು. ನಾನು ಭಯೋತ್ಪಾದಕ ಹೇಗಾಗುತ್ತೇನೆ? ದೆಹಲಿಯ ಜನರು ನನ್ನನ್ನು ಮಗನಂತೆ ಪರಿಗಣಿಸುತ್ತಾರೋ, ಸಹೋದರ ಅಥವಾ ಭಯೋತ್ಪಾದಕನಾಗಿ ಪರಿಗಣಿಸುತ್ತಾರೋ ಎಂಬುದನ್ನು ದೆಹಲಿಯ ಜನರೇನಿರ್ಧರಿಸಲಿ ಎಂದು ಹೇಳಿದ್ದಾರೆ.
ಪರ್ವೇಶ್ ವರ್ಮಾ ಹೇಳಿದ್ದೇನು?
ದೆಹಲಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪರ್ವೇಶ್ ವರ್ಮಾ,ಅರವಿಂದ ಕೇಜ್ರಿವಾಲ್ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮದೀಪುರ್‌ನ ರಸ್ತೆಗಳು ಶಾಹೀನ್‌ಬಾಗ್ ಆಗುತ್ತವೆ. ಕೇಜ್ರಿವಾಲ್‌ನಂಥಾ ಹಲವಾರು ಮೋಸಗಾರರು ಮತ್ತು ಭಯೋತ್ಪಾದಕರು ದೆಹಲಿಯಲ್ಲಿ ಅಡಗಿಕೊಂಡಿದ್ದಾರೆ. ಅವರನ್ನು ಇಲ್ಲಿಂದ ಕಿತ್ತೊಗೆಯಬೇಕು. ಕಾಶ್ಮೀರದಲ್ಲಿರುವ ಭಯೋತ್ಪಾದಕರ ವಿರುದ್ಧ ಹೋರಾಡಬೇಕೇ ಅಥವಾ ದೆಹಲಿಯಲ್ಲಿರುವ ಉಗ್ರ ಕೇಜ್ರಿವಾಲ್ ವಿರುದ್ಧ ಹೋರಾಡಬೇಕೆ ಎಂಬ ಬಗ್ಗೆ ಅರ್ಥ ಮಾಡಿಕೊಳ್ಳಲು ನಾನು ವಿಫಲವಾಗಿದ್ದೇನೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.