ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ | ಆರೋಪಿಗಳಿಗೆ ದಾಖಲೆ ತಲುಪಿಸಿ: ಕೋರ್ಟ್‌

ಪಿಟಿಐ
Published 9 ಅಕ್ಟೋಬರ್ 2024, 14:35 IST
Last Updated 9 ಅಕ್ಟೋಬರ್ 2024, 14:35 IST
.
.   

ನವದೆಹಲಿ: ‘ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಚಾರ್ಚ್‌ಶೀಟ್‌ ಹಾಗೂ ಇತರ ಎಲ್ಲ ದಾಖಲೆಗಳ ಪ್ರತಿಗಳನ್ನು ಈ ಪ್ರಕರಣದ ಆರೋಪಿಗಳಿಗೆ ತಲುಪಿಸಿ’ ಎಂದು ವಿಶೇಷ ನ್ಯಾಯಾಲಯ ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

‘ಮುಂದಿನ ವಿಚಾರಣೆ ನಡೆಯುವ ನವೆಂಬರ್‌ 4ರ ಒಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು’ ಎಂದು ವಿಶೇಷ ನ್ಯಾಯಾಧೀಶೆ ಕಾವೇರಿ ಬವೆಜಾ ಅವರು ಸೂಚಿಸಿದರು.

‘ದಾಖಲೆಗಳ ಪರಿಶೀಲನೆಗೆ ತನಿಖಾ ಸಂಸ್ಥೆಯು ಗೊತ್ತು ಮಾಡಿರುವ ಸ್ಥಳವು ಸ್ವಚ್ಛತೆಯಿಂದ ಕೂಡಿಲ್ಲ. ಆ ಸ್ಥಳದ ಸಮೀಪದಲ್ಲಿ ಮಂಗಗಳ ವಾಸವಿದೆ. ಆ ಸ್ಥಳವು ಸುರಕ್ಷಿತವಾಗಿಯೂ ಇಲ್ಲ’ ಎಂದು ಪ್ರತಿವಾದಿಗಳ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಈ ಕಾರಣಕ್ಕಾಗಿ ನ್ಯಾಯಾಲಯವು ಈ ನಿರ್ದೇಶನ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.