ADVERTISEMENT

ಫ್ರೆಂಚ್ ರಾಯಭಾರಿ ಫೋನ್‌ ಕದ್ದ ಆರೋಪಿಗಳ ಸೆರೆ

ಪಿಟಿಐ
Published 30 ಅಕ್ಟೋಬರ್ 2024, 13:33 IST
Last Updated 30 ಅಕ್ಟೋಬರ್ 2024, 13:33 IST
   

ನವದೆಹಲಿ: ಚಾಂದಿನಿ ಚೌಕ್ ಮಾರುಕಟ್ಟೆಗೆ ಭೇಟಿ ನೀಡಿದ್ದ ಫ್ರೆಂಚ್ ರಾಯಭಾರಿ ಥಿಯೆರಿ ಮಥೌ ಅವರ ಮೊಬೈಲ್ ಫೋನ್ ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಥೌ ಮತ್ತು ಅವರ ಪತ್ನಿ ಅಕ್ಟೋಬರ್ 20ರಂದು ಮಾರುಕಟ್ಟೆಗೆ ಭೇಟಿ ನೀಡಿದ್ದಾಗ, ಜೇಬಿನಲ್ಲಿದ್ದ ಮೊಬೈಲ್ ಕಳ್ಳತನವಾಗಿದೆ ಎಂದು ಅವರು ಹೇಳಿದರು.

ಘಟನೆಯ ಕುರಿತು ಅಕ್ಟೋಬರ್ 21ರಂದು ರಾಯಭಾರ ಕಚೇರಿಯಿಂದ ಮಾಹಿತಿ ದೊರೆತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

20ರಿಂದ 25 ವರ್ಷ ವಯಸ್ಸಿನ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.