ನವದೆಹಲಿ: ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಲಾಗಿರುವ ಮರಣದಂಡನೆಯನ್ನು ಯಾವುದೇ ಕಾರಣಕ್ಕೂ ತಡಮಾಡಬಾರದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ನಾಲ್ಕು ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದ ಆದೇಶಕ್ಕೆ ತಡೆ ನೀಡಿರುವ ಕುರಿತು ಭಾನುವಾರ ನಡೆದ ವಿಶೇಷ ಕಲಾಪದಲ್ಲಿ ತುಷಾರ್ ತಮ್ಮ ವಾದ ಮಂಡಿಸಿದರು.
ತಮ್ಮ ವಾದ ಮುಂದುವರಿಸಿದ ಮೆಹ್ತಾ, ಶಿಕ್ಷೆಗೆ ಒಳಗಾಗಿರುವ ಅಪರಾಧಿ ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣ ನೀಡಿದ್ದಾನೆ. ಇದುಕಾನೂನನ್ನು ನಿರಾಸೆಗೊಳಿಸುವುದಲ್ಲದೆ, ಮರಣದಂಡನೆಯನ್ನು ನಿಧಾನಗೊಳಿಸಲು ಬಳಸುತ್ತಿರುವ ತಂತ್ರವಾಗಿದೆ. ಒಂದು ವೇಳೆ ಮರಣದಂಡನೆ ತಡವಾದರೆ, ಆರೋಪಿಯ ಮೇಲೆ ಅಮಾನವೀಯಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾದಿಸಿದರು.
ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ತಾನು ರಾಷ್ಟ್ರಪತಿಗಳ ಮುಂದೆ ಇನ್ನೂ ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲದ್ದರಿಂದ ಮರಣದಂಡನೆ ತೀರ್ಪಿಗೆ ತಡೆ ನೀಡಬೇಕೆಂದು ಮನವಿ ಸಲ್ಲಿಸಿದ್ದ. ಅಪರಾಧಿಯ ಮನವಿಯಂತೆ ಮರಣದಂಡನೆ ಶಿಕ್ಷೆಗೆ ಮುಂದಿನ ಆದೇಶ ಬರುವವರೆಗೆ ನ್ಯಾಯಾಲಯ ತಡೆ ನೀಡಲಾಗಿದೆ.
ದೆಹಲಿ ನ್ಯಾಯಾಲಯ ಫೆ.1ರಂದು ನಾಲ್ಕು ಮಂದಿಗೆ ಮರಣದಂಡನೆ ವಿಧಿಸಬೇಕಾಗಿತ್ತು. ಅಪರಾಧಿಗಳ ಪರವಾಗಿ ಎ.ಪಿ.ಸಿಂಗ್ ವಾದ ಮಂಡಿಸಿ ಸಂವಿಧಾನದಲ್ಲಾಗಲೀ ಅಥವಾ ಸುಪ್ರೀಂ ಕೋರ್ಟ್ ಆಗಲಿ ಶಿಕ್ಷೆವಿಧಿಸಿದ ನಂತರ ಇಂತಿಷ್ಟೇ ದಿನದಲ್ಲಿ ಅದನ್ನು ಜಾರಿಗೊಳಿಸಬೇಕೆಂದು ಎಲ್ಲಿಯೂ ಸಮಯ ನಿಗದಿಪಡಿಸಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.