ADVERTISEMENT

ಇನ್‌ಫ್ಲುಯೆಂಝಾ ಪತ್ತೆಗೆ ಮುಂಚಿತವಾಗಿ ಪರೀಕ್ಷೆ ನಡೆಸಲು ಸೂಚನೆ: ದೆಹಲಿ ಸಚಿವ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 12:22 IST
Last Updated 17 ಮಾರ್ಚ್ 2023, 12:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೆಮ್ಮು, ನೆಗಡಿ (ಇನ್‌ಫ್ಲುಯೆಂಝಾ) ಪ್ರಕರಣಗಳ ಪತ್ತೆಹಚ್ಚುವ ಸಲುವಾಗಿ ಜನರನ್ನು ಮುಂಚಿತವಾಗಿಯೇ ಪರೀಕ್ಷೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸೌರಭ್‌ ಭಾರದ್ವಾಜ್‌ ಅವರು ಶುಕ್ರವಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಇನ್‌ಫ್ಲುಯೆಂಝಾ ಪ್ರಕರಣಗಳು ಗರಿಷ್ಠ ಮಟ್ಟದಲ್ಲಿ ವರದಿಯಾಗುತ್ತಿವೆ. ಈ ಪ್ರಮಾಣವು ಮಾರ್ಚ್‌ ಅಂತ್ಯಕ್ಕೆ ತಗ್ಗಲಿದೆ. ದೇಶದ ಹಲವು ಭಾಗಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಇನ್‌ಫ್ಲುಯೆಂಝಾ ಪ್ರಕರಣಗಳು ವರದಿಯಾಗುತ್ತಿವೆ ಎಂದರು.

ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ರೋಗ ಪ್ರಸರಣ ತಡೆಯುವುದು, ಕೈತೊಳೆಯುವುದಂಥ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸದ್ಯ ಗಮನ ಕೇಂದ್ರೀಕರಿಸಲಾಗಿದೆ ಎಂದರು.

ADVERTISEMENT

ಅಸ್ತಮಾ, ಕೋವಿಡ್‌ನಂಥ ಕಾಯಿಲೆಯಿಂದ ಬಳಲುತ್ತಿರುವವರು, 65 ವರ್ಷ ಮೇಲ್ಪಟ್ಟವರು ಮತ್ತು 5 ವರ್ಷ ಒಳಗಿನ ಮಕ್ಕಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.