ADVERTISEMENT

ನೆಡುತೋಪು ನಿರ್ಮಾಣ ಅಭಿಯಾನ ಆರಂಭಿಸಿದ ದೆಹಲಿ ಸರ್ಕಾರ

ಪಿಟಿಐ
Published 16 ಅಕ್ಟೋಬರ್ 2023, 9:51 IST
Last Updated 16 ಅಕ್ಟೋಬರ್ 2023, 9:51 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್   

ನವದೆಹಲಿ: ಚಳಿಗಾಲದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು ಸೋಮವಾರ(ಅ.16) ನಗರದ ಈಶಾನ್ಯ ದೆಹಲಿಯ ಗರ್ಹಿ ಮಾಂಡುವಿನಲ್ಲಿ 2ನೇ ಹಂತದ ನೆಡುತೋಪು ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, 'ಕಳೆದ 8 ವರ್ಷಗಳಲ್ಲಿ ಹಸಿರು ಹೊದಿಕೆಯ ಹೆಚ್ಚಳವು ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸಿದೆ. ನಾವು ಈ ಆರ್ಥಿಕ ವರ್ಷದಲ್ಲಿ ಕುರುಚಲು ಗಿಡಗಳು ಸೇರಿದಂತೆ 52 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ. ಬೇಸಿಗೆಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವ ನಮ್ಮ ಕ್ರಿಯಾ ಯೋಜನೆಯ ಭಾಗವಾಗಿ ನಾವು ಈಗಾಗಲೇ 40 ಲಕ್ಷ ಸಸಿಗಳನ್ನು ನೆಟ್ಟಿದ್ದೇವೆ. ಈಗ ತೋಟಗಾರಿಕೆ ಅಭಿಯಾನದ 2ನೇ ಹಂತವನ್ನು ಪ್ರಾರಂಭಿಸುತ್ತಿದ್ದೇವೆ. ಉಳಿದ 12 ಲಕ್ಷ ಸಸಿಗಳನ್ನು ಚಳಿಗಾಲದಲ್ಲಿ ನೆಡಲಾಗುವುದು' ಎಂದು ರೈ ತಿಳಿಸಿದರು.

‌‌ನವದೆಹಲಿ ಮುನ್ಸಿಪಲ್ ಕೌನ್ಸಿಲ್ 50 ಲಕ್ಷ ಸಸಿಗಳನ್ನು ನೆಡುವ ಅಭಿಯಾನದ ಬಗ್ಗೆ ಶ್ಲಾಘಿಸಿದ ಅವರು, ನಗರದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಎಎಪಿ ಸರ್ಕಾರದ ಅವಧಿಯಲ್ಲಿ ದೆಹಲಿಯ ಹಸಿರು ಹೊದಿಕೆಯು ಶೇ.20 ರಿಂದ ಶೇ.23ಕ್ಕೆ ಏರಿದೆ. ಇದು ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಗೆ ಕಾರಣವಾಯಿತು ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.