ನವದೆಹಲಿ: ಗುರುಗ್ರಾಮ ಮತ್ತು ದೆಹಲಿ ನಡುವಿನ ರಸ್ತೆಯನ್ನು ಬಂದ್ಹರಿಯಾಣ ಸರ್ಕಾರ ನಿನ್ನೆ ರಾತ್ರಿ ಬಂದ್ ಮಾಡಿದ್ದರಿಂದ ಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದರಿಂದ ಗೊಂದಲಕ್ಕೆ ಒಳಗಾದ ವಾಹನ ಸವಾರರುಪ್ರತಿಭಟನೆ ನಡೆಸಿದರು. ಗಡಿಯಲ್ಲಿಬಹುತೇಕ ವಲಸೆ ಹಾಗೂ ಕೂಲಿ ಕಾರ್ಮಿಕರು ಇದ್ದರು. ಸೈಕಲ್‌ಗಳು ಹಾಗೂ ದ್ವಿಚಕ್ರ ವಾಹನಗಳು, ಕಾರುಗಳು, ಲಘು ವಾಣಿಜ್ಯ ವಾಹನಗಳ ಮೂಲಕ ತಮ್ಮ ಸ್ವಂತ ಊರುಗಳಿಗೆ ತೆರಳಲು ಮುಂದಾಗಿದ್ದರು.
ಈ ವೇಳೆ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರನ್ನು ಮಾತ್ರ ತಪಾಸಣೆ ನಡೆಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇತರೆ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.
ಹರಿಯಾಣದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಹರಿಯಾಣ ಸರ್ಕಾರ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಇದರ ಮೊದಲ ಭಾಗವಾಗಿ ಗುರುಗ್ರಾಮ ಮತ್ತು ದೆಹಲಿ ನಡುವಿನ ರಸ್ತೆಯನ್ನು ಬಂದ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.