ADVERTISEMENT

ಪಠ್ಯದಲ್ಲಿಲ್ಲದ ಪ್ರಶ್ನೆ: ಎನ್‌ಟಿಎ ಅಭಿಪ್ರಾಯ ಕೇಳಿದ ದೆಹಲಿ ಹೈಕೋರ್ಟ್‌

ಪಿಟಿಐ
Published 27 ಜೂನ್ 2024, 15:53 IST
Last Updated 27 ಜೂನ್ 2024, 15:53 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ಈ ಬಾರಿಯ ‘ನೀಟ್‌’ನಲ್ಲಿ ಪಠ್ಯದಲ್ಲಿ ಇಲ್ಲದ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಅಭಿಪ್ರಾಯ ಕೇಳಿದೆ.

ಭೌತವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯಲ್ಲಿ ಒಂದು ಪ್ರಶ್ನೆ ‘ರೇಡಿಯೊ ಆ್ಯಕ್ಟಿವಿಟಿ’ ವಿಷಯವನ್ನು ಆಧಾರವಾಗಿಟ್ಟುಕೊಂಡು ಕೇಳಲಾಗಿತ್ತು. ಈ ವರ್ಷದ ನೀಟ್‌ಗೆ ಈ ವಿಷಯ ಪಠ್ಯದ ಭಾಗವಾಗಿರಲಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. 

ಮತ್ತೊಂದು ಪ್ರಶ್ನೆಯಲ್ಲೂ ತಪ್ಪು ಕಾಣಿಸಿಕೊಂಡಿದ್ದು, ‘ತಪ್ಪಾದ ಆಯ್ಕೆ’ಯನ್ನು ಸರಿ ಉತ್ತರ ಎಂದು ಎನ್‌ಟಿಎ ಘೋಷಿಸಿದೆ ಎಂದು ಅವರು ದೂರಿದ್ದಾರೆ.  

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ರಜಾ ಕಾಲದ ಪೀಠದ ನ್ಯಾಯಮೂರ್ತಿ ಧರ್ಮೇಶ್‌ ಶರ್ಮ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರ, ಎನ್‌ಟಿಎ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಪ್ರತಿನಿಧಿಸುವ ವಕೀಲರಿಗೆ ಎರಡು ವಾರಗಳ ಕಾಲಾವಕಾಶ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.