ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ನಡೆದ ಗುಂಡಿನದಾಳಿ ಪ್ರಕರಣವನ್ನು ಸ್ವಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿರುವ ದೆಹಲಿ ಹೈಕೋರ್ಟ್, ನ್ಯಾಯಾಲಯದ ಆವರಣದಲ್ಲಿ ಸಮರ್ಪಕ ಮತ್ತು ಪರಿಣಾಮಕಾರಿ ಭದ್ರತೆಗೆ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಅಭಿಪ್ರಾಯಪಟ್ಟಿತು.
ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ, ಈ ಬಗ್ಗೆ ಪ್ರಮಾಣಪತ್ರದ ಸ್ವರೂಪದಲ್ಲಿ ಅಗತ್ಯ ಸಲಹೆ ನೀಡಬೇಕು ಎಂದು ಸೂಚಿಸಿ ದೆಹಲಿ ಪೊಲೀಸ್, ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ, ವಕೀಲರ ಸಂಘಕ್ಕೆ ನೋಟಿಸ್ ಜಾರಿ ಮಾಡಿತು.
‘ರೋಹಿಣಿ ಕೋರ್ಟ್ ಸಭಾಂಗಣದಲ್ಲಿನ ಶೂಟೌಟ್ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿದ್ದೇವೆ. ಸೂಕ್ತ ಭದ್ರತೆಗೆ ಪೂರಕವಾಗಿ ಮೌಲ್ಯಯುತ ಸಲಹೆಗಳನ್ನು ಕೇಳುತ್ತಿದ್ದೇವೆ‘ ಎಂದು ಪೀಠ ಹೇಳಿತು.
ಕಳೆದ ಶುಕ್ರವಾರ ಗುಂಡಿನದಾಳಿ ಪ್ರಕರಣ ನಡೆದಿತ್ತು. ವಕೀಲರ ಸೋಗಿನಲ್ಲಿದ್ದ ಗ್ಯಾಂಗ್‌ಸ್ಟರ್‌ಗಳು ಕೃತ್ಯ ಎಸಗಿದ್ದರು. ಈ ವೇಳೆ ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿ ಸೇರಿದಂತೆ ಮೂವರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.