ನವದೆಹಲಿ: 'ಛಪಾಕ್ ' ಸಿನಿಮಾದಲ್ಲಿ ತನ್ನ ಹೆಸರು ತೋರಿಸುತ್ತಿಲ್ಲ ಎಂದು ನಿರ್ಮಾಪಕರ ವಿರುದ್ಧ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಯ ಪರ ವಕೀಲೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆ ಲಕ್ಷ್ಮಿಯ ಪರ ವಕೀಲೆಅಪರ್ಣಾ ಭಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಯನ್ನುಜನವರಿ 29ಕ್ಕೆ ಹೈಕೋರ್ಟ್ ಮುಂದೂಡಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಮಹಿಳೆಯ ಪರ ವಕೀಲರಾಗಿ ನಾನು ಆ್ಯಸಿಡ್ ದಾಳಿ ಪ್ರಕರಣದಲ್ಲಿ ಸಾಕಷ್ಟು ಪರಿಶ್ರಮ ಹಾಕಿದ್ದೇನೆ. ಮಹಿಳೆಯ ಕುರಿತು ಸಿನಿಮಾ ಮಾಡುವಾಗ ನನ್ನ ಹೆಸರನ್ನೂ ಸಿನಿಮಾದಲ್ಲಿ ಸೇರಿಸಬೇಕಾಗಿತ್ತು. ಸಿನಿಮಾ ನಿರ್ಮಾಪಕರು ಇದನ್ನು ನಿರ್ಲಕ್ಷಿಸಿದ್ದಾರೆ. ಇವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಜನವರಿ 11ರಂದು ದೆಹಲಿ ಹೈಕೋರ್ಟ್ ಆದೇಶ ನೀಡಿ, ನನ್ನ ಹೆಸರನ್ನೂ ತೋರಿಸಬೇಕು ಎಂದು ತಿಳಿಸಿತ್ತು. ಈ ಆದೇಶವನ್ನೂ ನಿರ್ಮಾಪಕರು ಪಾಲಿಸಿಲ್ಲ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.