ADVERTISEMENT

ನವದೆಹಲಿ: ಎಚ್‌3ಎನ್‌2 ಪ್ರಕರಣಗಳ ಸಂಖ್ಯೆ ಹೆಚ್ಚಳ

ಪಿಟಿಐ
Published 14 ಮಾರ್ಚ್ 2023, 15:55 IST
Last Updated 14 ಮಾರ್ಚ್ 2023, 15:55 IST
   

ನವದೆಹಲಿ: ಜ್ವರ, ಶೀತ ಮತ್ತು ಮೈಕೈ ನೋವುಗಳಂತಹ ರೋಗಲಕ್ಷಣಗಳನ್ನು ಹೊಂದಿರುವ ಎಚ್‌3ಎನ್‌2 ವೈರಸ್ ಸೋಂಕಿನಿಂದ ರೋಗಿಗಳು ಇಲ್ಲಿನ ಆಸ್ಪತ್ರೆಗೆ ಬರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.

ಈ ರೋಗ ಲಕ್ಷಣಗಳಿರುವವರು ನಿರಂತರ ಕೆಮ್ಮಿನಿಂದಾಗಿ ದುರ್ಬಲಗೊಳ್ಳುತ್ತಾರೆ. ಅಲ್ಲದೆ ಕೆಲವು ದಿನಗಳಿಂದ ಒಪಿಡಿ ಪರೀಕ್ಷೆಗೆ ಬರುವವರ ಸಂಖ್ಯೆಯಲ್ಲಿ ಶೆ 150 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.

ವ್ಯಕ್ತಿಯಲ್ಲಿ ಬಿಪಿ, ನಾಡಿಮಿಡಿತ, ಆಮ್ಲಜನಕ ಮಟ್ಟದಲ್ಲಿ ವ್ಯತ್ಯಾಸವಾದರೆ, ಪ್ರಜ್ಞಾಸ್ಥಿತಿ ಕಳೆದುಕೊಳ್ಳುವಂತಾದರೆ ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗಿರುತ್ತದೆ ಎಂದರು.

ADVERTISEMENT

ವೈರಾಣು ಹರಡಲು ಸಂಭಾವ್ಯ ಕಾರಣಗಳೆಂದರೆ ವಾತಾವರಣ ಬದಲಾವಣೆ, ವೈರಸ್‌ಗಳ ರೂಪಾಂತರ ಎಂದು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯ ಡಾ. ವಿನಯ್‌ ಕಾಂಟ್ರೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.