ನವದೆಹಲಿ: ದೇಶದಲ್ಲಿ ಕೋವಿಡ್‌ನ ಎರಡನೇ ಅಲೆಯು ಉತ್ತುಂಗದಲ್ಲಿದ್ದಾಗ ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕಕ್ಕೆ ದೆಹಲಿ ಸರ್ಕಾರ ಬೇಡಿಕೆ ಇಟ್ಟಿತ್ತು ಎಂದು ಸುಪ್ರೀಂ ಕೋರ್ಟ್‌ನ ಸಮಿತಿಯು ವರದಿ ನೀಡಿದೆ.
ಏಪ್ರಿಲ್ 25 ಮತ್ತು ಮೇ 10 ರ ನಡುವೆ ರಾಷ್ಟ್ರ ರಾಜಧಾನಿಗೆ ಬೇಕಿದ್ದ ಆಮ್ಲಜನಕದ ಅಗತ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಿ ದೆಹಲಿ ಸರ್ಕಾರ ಬೇಡಿಕೆ ಇಟ್ಟಿತ್ತು. ದೆಹಲಿ ಸರ್ಕಾರದ ಈ ಬೇಡಿಕೆಯಿಂದ ದೇಶದ 12 ರಾಜ್ಯಗಳಲ್ಲಿ ಆಮ್ಲಜನಕದ ಅಭಾವ ತಲೆದೋರಿರಬಹುದು ಎಂದು ವರದಿ ಹೇಳಿದೆ.
ರಾಷ್ಟ್ರ ರಾಜಧಾನಿಯಲ್ಲಿನ ಬೆಡ್‌ಗಳಿಗೆ ಬಳಕೆಯಾಗುವ ಆಮ್ಲಜನಕ ಸಾಮರ್ಥ್ಯವು 289 ಮೆಟ್ರಿಕ್ ಟನ್ ಇದೆ. ಆದರೆ, ಅಗತ್ಯವಿರುವುದಕ್ಕಿಂತ ನಾಲ್ಕು ಪಟ್ಟು ಅಂದರೆ 1,140 ಮೆಟ್ರಿಕ್ ಟನ್ ಆಮ್ಲಜನಕಕ್ಕೆ ದೆಹಲಿ ಸರ್ಕಾರವು ಬೇಡಿಕೆ ಇಟ್ಟಿತ್ತು ಎಂದು ಲೆಕ್ಕಪರಿಶೋಧನಾ ಸಮಿತಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ.
ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ನೇತೃತ್ವದ ಐವರ ಸದಸ್ಯರ ಲೆಕ್ಕಪರಿಶೋಧನಾ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಆಮ್ಲಜನಕ ಬೇಡಿಕೆ ವಿಚಾರದಲ್ಲಿ ದೆಹಲಿ ಸರ್ಕಾರವು 'ಉತ್ಪ್ರೇಕ್ಷೆ' ಮಾಡಿದೆ ಎಂದು ಸಮಿತಿ ಹೇಳಿದೆ.
ಇದನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.