ADVERTISEMENT

ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ₹ 23 ಲಕ್ಷ ವಂಚನೆ ಮಾಡಿದವ ಮಂಗಳೂರಲ್ಲಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2023, 2:51 IST
Last Updated 22 ಜನವರಿ 2023, 2:51 IST
ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌
ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌   

ನವದೆಹಲಿ: ಯುಎಇಯ ರಾಜಮನೆತನದ ಕಚೇರಿ ಅಧಿಕಾರಿಯಂತೆ ನಟಿಸಿ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ₹23.46 ಲಕ್ಷ ವಂಚಿಸಿದ ಆರೋಪಿ ಮಹಮದ್ ಷರೀಫ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮಹಮ್ಮದ್ ಶರೀಫ್ ಆಗಸ್ಟ್‌ 1ರಿಂದ ನವೆಂಬರ್ 20ರವರೆಗೆ ಹೋಟೆಲ್‌ನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ತಂಗಿದ್ದ. ಈ ಕುರಿತು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಲೀಲಾ ಪ್ಯಾಲೇಸ್ ಹೋಟೆಲ್ ಮ್ಯಾನೇಜರ್ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿತ್ತು.

ADVERTISEMENT

ಮಹಮ್ಮದ್ ಶರೀಫ್ ಯುಎಇ ಸುಲ್ತಾನ್‌ ಶೇಕ್ ಫಲ್ಹಾ ಬಿನ್ ಜಾಯೇದ್ ಅಲ್ ನಹ್ಯಾನ್ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೋಟೆಲ್‌ಗೆ ನಂಬಿಸಲು ಆರಂಭದಲ್ಲಿ ಮಹಮ್ಮದ್ ಶರೀಫ್ ₹11.5 ಲಕ್ಷ ಹಣ ಪಾವತಿಸಿದ್ದ. ಆದರೆ, ಬಾಕಿ ₹23 ಲಕ್ಷ ಪಾವತಿಸದೇ ಪರಾರಿಯಾಗಿದ್ದ.

ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಷರೀಫ್ ಬಂಧನಕ್ಕೆ ಬಲೆ ಬೀಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.