ನವದೆಹಲಿ: ಸರ್ಕಾರದ ನಕಲಿ ವೆಬ್‌ಸೈಟ್ ರಚಿಸಿ ಸಾವಿರಕ್ಕೂ ಹೆಚ್ಚು ಮಂದಿಗೆ ವಂಚನೆ ಎಸಗಿದ ಆರೋಪದಲ್ಲಿ ಮೂವರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮೋನು ಶರ್ಮಾ (24), ಕುಲ್‌ದೀಪ್ ಸಿಂಗ್ (27) ಮತ್ತು ಚಿತ್ರೇಶ್ ಗೋಯಲ್ (26) ಬಂಧಿತರು. ಆರೋಪಿಗಳು ನಕಲಿ ವೆಬ್‌ಸೈಟ್ ಮೂಲಕ ಗ್ರಾಮೀಣ ಪ್ರದೇಶದ ಜನರಿಂದ ಸರ್ಕಾರಿ ಸೇವೆಗಳ ಹೆಸರಿನಲ್ಲಿ ₹ 17 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ) ನಕಲಿ ವೆಬ್‌ಸೈಟ್ ಮೂಲಕ ಇವರು ವಂಚನೆ ನಡೆಸಿದ್ದಾರೆ ಎಂದೂ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.