ADVERTISEMENT

ನ್ಯೂಸ್ ಕ್ಲಿಕ್ ವೆಬ್ ಪೋರ್ಟಲ್‌ ಕಚೇರಿಗಳ ಮೇಲೆ ದೆಹಲಿ ಪೊಲೀಸ್ ದಾಳಿ

News Click ವೆಬ್ ಪೋರ್ಟಲ್ ಚೀನಿ ವಿಚಾರಧಾರೆಗಳನ್ನು ಹರಡಲು ಭಾರಿ ಹಣ ಪಡೆದಿದೆ ಎಂಬ ಆರೋಪ

ಪಿಟಿಐ
Published 3 ಅಕ್ಟೋಬರ್ 2023, 5:36 IST
Last Updated 3 ಅಕ್ಟೋಬರ್ 2023, 5:36 IST
<div class="paragraphs"><p>News Click</p></div>

News Click

   

ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಘಟಕವು ನ್ಯೂಸ್ ಕ್ಲಿಕ್ (News Click www.newsclick.in) ಎಂಬ ವೆಬ್ ಪೋರ್ಟಲ್‌ಗೆ ಸೇರಿದ ಕಚೇರಿಗಳ ಮೇಲೆ, ಸಂಬಂಧಿಸಿ ಪತ್ರಕರ್ತರ ಮನೆ ಮೇಲೆ ದಾಳಿ ನಡೆಸಿದೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆ X ನಲ್ಲಿ ಟ್ವೀಟ್ ಮಾಡಿದೆ.

ADVERTISEMENT

News Click ವೆಬ್ ಪೋರ್ಟಲ್ ಚೀನಿ ವಿಚಾರಧಾರೆಗಳನ್ನು ಹರಡಲು ಭಾರಿ ಹಣ ಪಡೆದಿದೆ. ಪೋರ್ಟಲ್ ಮೂಲಕ ಚೀನಿ ವಿಚಾರಧಾರೆಗಳನ್ನು ಹರಡುತ್ತಿದೆ ಎಂದು ಆರೋಪಿಸಿ ದಿ ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿತ್ತು.

ನ್ಯೂಸ್ ಕ್ಲಿಕ್ ವೆಬ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿದ್ದ 7 ಪತ್ರಕರ್ತರ ಮನೆ ಮೇಲೂ ದಾಳಿ ನಡೆದಿದೆ.

ವರದಿ ಆಧರಿಸಿ ದೆಹಲಿ ಪೊಲೀಸ್ ವಿಶೇಷ ಘಟಕ ಎನ್‌ಸಿಆರ್ ವ್ಯಾಪ್ತಿಯಲ್ಲಿ News Click ಕಚೇರಿ ಹಾಗೂ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ಮಾಡಿದೆ. ತಪಾಸಣೆ ಮುಂದುವರೆದಿದೆ.

ಇವುಗಳನ್ನೂ ಓದಿ

ನ್ಯೂಸ್ ಕ್ಲಿಕ್‌ಗೆ ಚೀನಾ ಹಣ: ಶೀಘ್ರ ಆರೋಪ ಪಟ್ಟಿ ಸಲ್ಲಿಕೆಗೆ ಇ.ಡಿ ಸಿದ್ದತೆ

ನ್ಯೂಸ್‌ ಕ್ಲಿಕ್‌ ಮೇಲೆ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.