ADVERTISEMENT

Mumbai stampede: ಜನಸಂದಣಿ ನಿಯಂತ್ರಣ ಕ್ರಮಗಳನ್ನು ಪ್ರಕಟಿಸಿದ ದೆಹಲಿ ರೈಲ್ವೆ

ಪಿಟಿಐ
Published 28 ಅಕ್ಟೋಬರ್ 2024, 2:39 IST
Last Updated 28 ಅಕ್ಟೋಬರ್ 2024, 2:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ನವದೆಹಲಿ ಮತ್ತು ಆನಂದ ವಿಹಾರ್‌ ರೈಲು ನಿಲ್ದಾಣಗಳಲ್ಲಿ ಜನಸಂದಣಿ ನಿರ್ವಹಣೆ ಮತ್ತು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವುದಾಗಿ ಉತ್ತರ ಹಾಗೂ ದೆಹಲಿ ರೈಲ್ವೆ ವಿಭಾಗ ಭಾನುವಾರ ಪ್ರಕಟಿಸಿದೆ.

ದೀಪಾವಳಿ ಮತ್ತು ಛತ್ ಹಬ್ಬಕ್ಕೆ ಊರಿಗೆ ತೆರಳಲು ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಗೋರಖಪುರಕ್ಕೆ ತೆರಳುವ ರೈಲು ಏರುವ ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ 10 ಮಂದಿ ಗಾಯಗೊಂಡಿದ್ದರು.

ADVERTISEMENT

ಘಟನೆ ಬೆನ್ನಲೇ ದೆಹಲಿ ರೈಲ್ವೆ ವಿಭಾಗ ಈ ನಿಯಂತ್ರಣ ಕ್ರಮಗಳನ್ನು ಹೊರಡಿಸಿದೆ.

ಮುಂಬರುವ ದೀಪಾವಳಿ ಮತ್ತು ಛತ್ ಹಬ್ಬಗಳಲ್ಲಿ ಹೆಚ್ಚಿನ ಪ್ರಯಾಣಿಕರ ನಿರೀಕ್ಷೆಯಲ್ಲಿ, ಉತ್ತರ ರೈಲ್ವೆಯ ದೆಹಲಿ ವಿಭಾಗವು ಆನಂದ ವಿಹಾರ್‌ ಹಾಗೂ ನವದೆಹಲಿ ರೈಲು ನಿಲ್ದಾಣ (NDLS)ದಲ್ಲಿ ಜನಸಂದಣಿ ನಿರ್ವಹಣೆ ಮತ್ತು ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ಈ ಕ್ರಮಗಳು ನ.7ರ ವರೆಗೆ ಜಾರಿಯಲ್ಲಿರಲಿವೆ ಎಂದು ಉತ್ತರ ರೈಲ್ವೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಮುಖ ಕ್ರಮಗಳು ಹೀಗಿವೆ..

  • ಎನ್‌ಡಿಎಲ್‌ಎಸ್ ಮತ್ತು ಆನಂದ್ ವಿಹಾರ್ ರೈಲು ನಿಲ್ದಾಣಗಳ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್‌ಗಳು, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು ಹಾಗೂ ವಿಚಾರಣಾ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.

  • ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, 'ಮೇ ಐ ಹೆಲ್ಪ್ ಯು' ಸಹಾಯವಾಣಿ, ಮತ್ತು ಮೊಬೈಲ್ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ.

  • ಈ ಅವಧಿಯಲ್ಲಿ ದೆಹಲಿ ಮೆಟ್ರೋ ಸ್ಕೈವಾಕ್‌ನಿಂದ ಪಾದಚಾರಿ ಮೇಲ್ಸೇತುವೆಗೆ ಇರುವ ನೇರ ಪ್ರವೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

  • ಹಬ್ಬಗಳ ಸಂದರ್ಭಗಳಲ್ಲಿ ರೈಲು ನಿಲ್ದಾಣಗಳಲ್ಲಿ ದಟ್ಟಣೆ ಕಡಿಮೆ ಮಾಡಲು ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

  • ಜನ ದಟ್ಟಣೆಯನ್ನು ತಪ್ಪಿಸಲು ಹಾಗೂ ಸುಗಮ ಬೋರ್ಡಿಂಗ್ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಕನಿಷ್ಠ ಒಂದು ಗಂಟೆ ಮೊದಲು ಆಗಮಿಸುವಂತೆ ಉತ್ತರ ರೈಲ್ವೆ ಮನವಿ ಮಾಡಿದೆ.

ಈ ಕ್ರಮಗಳು ತಾತ್ಕಾಲಿಕವಾಗಿದ್ದು, ನವೆಂಬರ್‌ 7ರವರೆಗೆ ಮಾತ್ರ ಜಾರಿಯಲ್ಲಿರುತ್ತವೆ. ಅನುಸರಿಸುವಂತೆ ರೈಲ್ವೆ ಇಲಾಖೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.