ADVERTISEMENT

Delhi Rains: ಅಧಿಕ ತಾಪಮಾನದ ಪರಿಣಾಮ ದೆಹಲಿಯಲ್ಲಿ ಮಳೆ

ಏಜೆನ್ಸೀಸ್
Published 27 ಜೂನ್ 2024, 3:27 IST
Last Updated 27 ಜೂನ್ 2024, 3:27 IST
<div class="paragraphs"><p>ಮಳೆ</p></div>

ಮಳೆ

   

ನವದೆಹಲಿ: ಅಧಿಕ ತಾಪಮಾನ ಹಾಗೂ ಬಿಸಿ ಗಾಳಿಯಿಂದ ತತ್ತರಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ಭಾಗಗಳಲ್ಲಿ ಗುರುವಾರ ಬೆಳಗ್ಗೆ ವ್ಯಾಪಕ ಮಳೆಯಾಗಿದೆ.

ಅಧಿಕ ತಾಪಮಾನದ ಪರಿಣಾಮ ಈ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸರಿತಾ ವಿಹಾರ್, ಆರ್‌ಕೆ ಪುರಂ, ಮುನಿಕೀರಾ ಹಾಗೂ ರಾವ್‌ ತುಲರಾಂ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಇನ್ನು ಹಲವು ಪ್ರದೇಶಗಳಲ್ಲಿ ಮಳೆಯಾಗಿದ್ದು ವರದಿ ಬರಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯ ಹಲವೆಡೆ ಇಂದು ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆಯಿದೆ. ಕೆಲವು ಸ್ಥಳಗಳಲ್ಲಿ ಆಲಿಕಲ್ಲು ಸಹಿತ ಲಘು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರದ ನಿವಾಸಿಗಳು ಮನೆಯೊಳಗೆ ಇರಲು, ಅನಗತ್ಯ ಪ್ರಯಾಣವನ್ನು ತಪ್ಪಿಸಲು ಹಾಗೂ ಮಳೆ ಬೀಳುವ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲದಿರುವಂತೆ ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.