ADVERTISEMENT

ದೆಹಲಿ ಗಲಭೆ: ನಾಲ್ವರ ಮೇಲೆ ದೋಷಾರೋಪ ನಿಗದಿ ಮಾಡಲು ನ್ಯಾಯಾಲಯ ಸೂಚನೆ

ಪಿಟಿಐ
Published 19 ಆಗಸ್ಟ್ 2022, 15:25 IST
Last Updated 19 ಆಗಸ್ಟ್ 2022, 15:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿ ಗಲಭೆ ವೇಳೆ ವಾಹನ ನಿಲುಗಡೆ ಸ್ಥಳವೊಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ನಾಲ್ವರ ವಿರುದ್ಧ ದೋಷಾರೋಪ ನಿಗದಿ ಮಾಡುವಂತೆ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಶಾರುಕ್‌, ಅಶ್ವನಿ, ಅಶು ಮತ್ತು ಜುಬೈರ್‌ ಸೇರಿದಂತೆ 100–200 ಮಂದಿ ಗಲಭೆಕೋರರು ಕೈಯಲ್ಲಿಬಡಿಗೆಗಳು, ಪೆಟ್ರೋಲ್‌ ತುಂಬಿದ ಬಾಟಲಿಗಳನ್ನು ಹಿಡಿದು 2020ರ ಫೆಬ್ರುವರಿ 25ರಂದು ಸಂಜೆ 4.30ರ ವೇಳೆಗೆ ಅಂಬೇಡ್ಕರ್‌ ಕಾಲೇಜು ವಾಹನ ನಿಲುಗಡೆ ಸ್ಥಳಕ್ಕೆ ಬಂದು ಗಲಭೆ ನಡೆಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅಮಿತಾಬ್‌ ರಾವತ್‌ ಹೇಳಿದ್ದಾರೆ.

ಕಾಸಿಮ್‌ ಮತ್ತು ಖಾಲಿದ್‌ ಅನ್ಸಾರಿ ಅವರ ವಿರುದ್ಧ ಸಾಕಕ್ಷ್ಯಗಳಿಲ್ಲ ಎಂದಿರುವ ನ್ಯಾಯಾಲಯ ಇವರನ್ನು ಖುಲಾಸೆ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.