ADVERTISEMENT

ಚಳಿಗಾಲದಲ್ಲಿ ದೆಹಲಿ ಮಾಲಿನ್ಯ ತಡೆಗೆ 21 ಅಂಶಗಳ ಕ್ರಿಯಾ ಯೋಜನೆ: ಗೋಪಾಲ್ ರಾಯ್

ಪಿಟಿಐ
Published 5 ಸೆಪ್ಟೆಂಬರ್ 2024, 11:00 IST
Last Updated 5 ಸೆಪ್ಟೆಂಬರ್ 2024, 11:00 IST
ಗೋಪಾಲ್ ರಾಯ್
ಗೋಪಾಲ್ ರಾಯ್   

ನವದೆಹಲಿ: ಚಳಿಗಾಲ ಆರಂಭವಾಗುತ್ತಿದ್ದಂತೆ ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಗೆ ಸರ್ಕಾರವು 21 ಅಂಶಗಳ ಚಳಿಗಾಲದ ಕ್ರಿಯಾ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ದೆಹಲಿ ಪರಿಸರ ಸಚಿವ ಗೋ‍ಪಾಲ್ ರಾಯ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ದೆಹಲಿಯ ಮಾಲಿನ್ಯ ನಿಯಂತ್ರಣ ಸಮಿತಿ(ಪಿಡಿಸಿಸಿ), ದೆಹಲಿ ಪೊಲೀಸ್, ದೆಹಲಿ ಸಾರಿಗೆ ನಿಗಮ(ಡಿಟಿಸಿ), ಲೋಕೋಪಯೋಗಿ ಇಲಾಖೆ(ಪಿಡಬ್ಲ್ಯುಡಿ) ಮತ್ತು ದೆಹಲಿ ಮೆಟ್ರೊ ರೈಲು ನಿಗಮ(ಡಿಎಂಆರ್‌ಸಿ) ಸೇರಿದಂತೆ 35 ಪ್ರಮುಖ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಈ ವರ್ಷ ಮಾಲಿನ್ಯ ತಡೆಗೆ ಸಮಗ್ರ ಯೋಜನೆ ರೂಪಿಸುವ ಕುರಿತಂತೆ ಚರ್ಚಿಸಿದರು.

‘ಕಳೆದ ವರ್ಷದ ರೀತಿಯೇ ಚಳಿಗಾಲದಲ್ಲಿ ತುತ್ತತುದಿಗೆ ತಲುಪುವ ವಾಯುಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದೆ. ಈ ವರ್ಷ ಹೊಸ ಯೋಜನೆ ರೂಪಿಸಿದ್ದು, 21 ಅಂಶಗಳ ಚಳಿಗಾಲದ ಕ್ರಿಯಾ ಯೋಜನೆ ಮೇಲೆ ಸರ್ಕಾರ ಕೆಲಸ ಮಾಡಲಿದೆ’ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

ಚಳಿಗಾಲಕ್ಕೆ ತಯಾರಿಯ ಭಾಗವಾಗಿ ನಮ್ಮ ಕ್ರಿಯಾ ಯೋಜನೆಗಳನ್ನು ಜಾರಿ ಮಾಡುವತ್ತ ಸರ್ಕಾರ ಗಮನ ಹರಿಸಿದೆ. ಕಳೆದ ವರ್ಷ ಮಾಲಿನ್ಯ ತಡೆಗೆ 15 ಅಂಶಗಳ ಕ್ರಿಯಾ ಯೋಜನೆ ರೂಪಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರದ ಕ್ರಮಗಳಿಂದಾಗಿ ದೆಹಲಿಯಲ್ಲಿ ಮಾಲಿನ್ಯ ಗಮನಾರ್ಹ ಮಟ್ಟದಲ್ಲಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.