ADVERTISEMENT

ನೀರಿನ ಸಮಸ್ಯೆ: ಪ್ರಮುಖ ಪೈಪ್‌ಲೈನ್‌ಗಳಿಗೆ ರಕ್ಷಣೆ ಕೋರಿ ದೆಹಲಿ ಕಮಿಷನರ್‌ಗೆ ಪತ್ರ

ಪಿಟಿಐ
Published 16 ಜೂನ್ 2024, 5:42 IST
Last Updated 16 ಜೂನ್ 2024, 5:42 IST
<div class="paragraphs"><p>ದೆಹಲಿ ಜಲ ಸಚಿವೆ ಆತಿಶಿ</p></div>

ದೆಹಲಿ ಜಲ ಸಚಿವೆ ಆತಿಶಿ

   

ನವದೆಹಲಿ: ದೆಹಲಿ ಪೊಲೀಸ್‌ ಕಮಿಷನರ್‌ ಸಂಜಯ್‌ ಅರೋರಾ ಅವರಿಗೆ ಭಾನುವಾರ ಪತ್ರ ಬರೆದಿರುವ ಜಲ ಸಚಿವೆ ಆತಿಶಿ, ರಾಷ್ಟ್ರ ರಾಜಧಾನಿಯಲ್ಲಿ ತಲೆದೋರಿರುವ ನೀರಿನ ಸಮಸ್ಯೆಯ ಕುರಿತು ವಿವರಿಸಿದ್ದಾರೆ.

ನಗರದ ಪ್ರಮುಖ ಪೈಪ್‌ಲೈನ್‌ಗಳ ರಕ್ಷಣೆಗೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸುವಂತೆ ಮನವಿ ಮಾಡಿದ್ದಾರೆ.

ADVERTISEMENT

'ಪೈಪ್‌ಲೈನ್‌ಗಳು ಸದ್ಯ ದೆಹಲಿ ಜನರ ಜೀವನಾಡಿಗಳಾಗಿ ಮಾರ್ಪಟ್ಟಿವೆ. ಅವುಗಳಿಗೆ ದುಷ್ಕರ್ಮಿಗಳು ಹಾನಿ ಮಾಡದಂತೆ ರಕ್ಷಿಸಲು ಹಾಗೂ ಗಸ್ತು ತಿರುಗಲು ಮುಂದಿನ 15 ದಿನಗಳ ವರೆಗೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲು ವಿನಂತಿಸುತ್ತೇನೆ. ಪೈಪ್‌ಲೈನ್‌ಗಳಿಗೆ ಹಾನಿಯುಂಟಾದರೆ, ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ದೆಹಲಿ ಜನರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ' ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ದೆಹಲಿಯಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಮಾನವೀಯ ನೆಲೆಯಲ್ಲಿ ಯಮುನಾ ನದಿಗೆ ಹೆಚ್ಚುವರಿ ನೀರು ಹರಿಸುವಂತೆ ದೆಹಲಿ ಸರ್ಕಾರವು ಹರಿಯಾಣಕ್ಕೆ ಇತ್ತಿಚೆಗೆ ಮನವಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.