ADVERTISEMENT

ಶಾಲೆಗಳಿಗೆ ಚಳಿಗಾಲದ ರಜೆ ವಿಸ್ತರಣೆ ಆದೇಶ ಹಿಂಪಡೆದ ದೆಹಲಿ ಶಿಕ್ಷಣ ನಿರ್ದೇಶನಾಲಯ

ಪಿಟಿಐ
Published 7 ಜನವರಿ 2024, 3:00 IST
Last Updated 7 ಜನವರಿ 2024, 3:00 IST
<div class="paragraphs"><p>ದೆಹಲಿಯಲ್ಲಿ ಚಳಿಯ ವಾತಾವರಣ</p></div>

ದೆಹಲಿಯಲ್ಲಿ ಚಳಿಯ ವಾತಾವರಣ

   

 (ಚಿತ್ರ ಕೃಪೆ– ಪಿಟಿಐ)

ನವದೆಹಲಿ: ರಾಷ್ಟ್ರ ರಾಜಧಾನಿಯ ಶಾಲೆಗಳಿಗೆ ಚಳಿಗಾಲದ ರಜೆಯನ್ನು ವಿಸ್ತರಿಸುವ ಆದೇಶವನ್ನು ದೆಹಲಿಯ ಶಿಕ್ಷಣ ನಿರ್ದೇಶನಾಲಯ ಶನಿವಾರ ರಾತ್ರಿ ಹಿಂಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹಿಂದಿನ ದಿನ, ಶೀತ ಹವಾಮಾನದ ಕಾರಣ ರಾಷ್ಟ್ರ ರಾಜಧಾನಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಚಳಿಗಾಲದ ರಜೆಯನ್ನು ಜನವರಿ 10ರವರೆಗೆ ವಿಸ್ತರಿಸಲಾಗಿದೆ ಎಂದು ನಿರ್ದೇಶನಾಲಯ ತಿಳಿಸಿದೆ ಎಂದು ಹೇಳಲಾಗಿತ್ತು. ಆದರೆ ‌ಆ ಆದೇಶದಲ್ಲಿ ಕೆಲವು ದೋಷಗಳಿವೆ ಎಂದು ದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಳಿಗಾಲದ ರಜೆಯನ್ನು ವಿಸ್ತರಿಸುವ ಆದೇಶವನ್ನು ತಪ್ಪಾಗಿ ಹೊರಡಿಸಲಾಗಿದೆ. ಆದೇಶವನ್ನು ತಕ್ಷಣವೇ ಹಿಂಪಡೆಯಲಾಗಿದೆ. ಭಾನುವಾರ ಬೆಳಿಗ್ಗೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಹಿಂದಿನ ಆದೇಶದಂತೆ ಶನಿವಾರ ರಜೆ ಕೊನೆಗೊಳ್ಳಲಿದ್ದು, ಸೋಮವಾರ ತರಗತಿಗಳು ಪುನರಾರಂಭಗೊಳ್ಳಲಿವೆ.

ಮುಂದಿನ ಕೆಲವು ದಿನಗಳವರೆಗೆ ದೆಹಲಿಯಲ್ಲಿ ತೀವ್ರ ಶೀತ ಗಾಳಿ, ದಟ್ಟವಾದ ಮಂಜು, ಲಘು ಮಳೆ ಮತ್ತು ತಾಪಮಾನದಲ್ಲಿ ಕುಸಿತ ಉಂಟಾಗುವ ಸಾಧ್ಯೆಯಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.