ಕೋಲ್ಕತ್ತ: ನವದೆಹಲಿಯಲ್ಲಿ ಈಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ ‘ಭಾರತ– ಭೂತಾನ್ ನದಿ ಆಯೋಗ’ ರಚಿಸುವಂತೆ ಒತ್ತಾಯಿಸಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದರು.
ಬಂಗಾಳದ ಎರಡು ಜಿಲ್ಲೆಗಳು ಮತ್ತು ಬಿಹಾರದ ಕೆಲ ಪ್ರದೇಶಗಳನ್ನು ಸೇರಿಸಿ ಕೇಂದ್ರಾಡಳಿತ ಪ್ರದೇಶ ರಚಿಸುವಂತೆ ಬಿಜೆಪಿಯ ಕೆಲ ನಾಯಕರು ಒತ್ತಾಯಿಸಿದರು. ಅಲ್ಲದೇ ಉತ್ತರ ಬಂಗಾಳವನ್ನು ಈಶಾನ್ಯ ರಾಜ್ಯಗಳಿಗೆ ಸೇರಿಸಲೂ ಹೇಳಿದ್ದಾರೆ. ’ಧೈರ್ಯವಿದ್ದರೆ ಬಂಗಾಳವನ್ನು ವಿಭಜಿಸಲು ಪ್ರಯತ್ನಿಸಲಿ‘ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.